ಮನೆ ಸುದ್ದಿ ಜಾಲ ಬಿಜೆಪಿ ಸೇರಿದ ರಾಘವ್ ಚಡ್ಡಾ ರಾಜ್ಯಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರಾಗಿ ನೇಮಕ – ಹೊಸ ಅಧಿಸೂಚನೆ...

ಬಿಜೆಪಿ ಸೇರಿದ ರಾಘವ್ ಚಡ್ಡಾ ರಾಜ್ಯಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರಾಗಿ ನೇಮಕ – ಹೊಸ ಅಧಿಸೂಚನೆ ಪ್ರಕಟ

0

ನವದೆಹಲಿ: ಇತ್ತೀಚೆಗೆ ಆಮ್ ಆದ್ಮಿ ಪಕ್ಷದಿಂದ ಹೊರಬಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾಅವರನ್ನು ರಾಜ್ಯಸಭೆಯ ಮೇಲ್ಮನೆಯ ಅರ್ಜಿಗಳ ಸಮಿತಿಯ ಹೊಸ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಾಜ್ಯಸಭಾ ಅಧ್ಯಕ್ಷ ಸಿ ಪಿ ರಾಧಾಕೃಷ್ಣನ್ ಅವರು ಅರ್ಜಿಗಳ ಸಮಿತಿಯನ್ನು ಪುನರ್ ರಚನೆ ಮಾಡಿದ ಬಳಿಕ, ಸದನದ ಒಟ್ಟು 10 ಸದಸ್ಯರನ್ನು ಈ ಸಮಿತಿಗೆ ನಾಮನಿರ್ದೇಶನ ಮಾಡಿದ್ದಾರೆ.

ಅಧಿಸೂಚನೆಯಲ್ಲಿ “ರಾಘವ್ ಚಡ್ಡಾ ಅವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ. ಮೇ 20 ರಿಂದ ಜಾರಿಗೆ ಬರುವಂತೆ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ರಾಜ್ಯಸಭೆ ಪ್ರಕಟಣೆ ತಿಳಿಸಿದೆ.

ರಾಘವ್ ಚಡ್ಡಾ ನೇತೃತ್ವದ ಸಮಿತಿಯ ಸದಸ್ಯರು:
ಹರ್ಷ್ ಮಹಾಜನ್, ಗುಲಾಮ್ ಅಲಿ, ಶಂಭು ಶರಣ್ ಪಟೇಲ್, ಮಯಂಕ್ಕುಮಾರ್ ನಾಯಕ್, ಮಸ್ತಾನ್ ರಾವ್ ಯಾದವ್ ಬೀಡಾ, ಜೆ.ಬಿ. ಮಾಥರ್ ಹಿಶಾಮ್, ಸುಭಾಶಿಶ್ ಖುಂಟಿಯಾ, ರುಂಗ್ವ್ರಾ ನರ್ಜಾರಿ ಹಾಗೂ ಸಂತೋಷ್ ಕುಮಾರ್ ಪಿ.ಇದೇ ವೇಳೆ ಮತ್ತೊಂದು ಅಧಿಸೂಚನೆಯಲ್ಲಿ, ರಾಜ್ಯಸಭಾ ಅಧ್ಯಕ್ಷರು ಮೇ 20, 2026ರಂದು ಕಾರ್ಪೊರೇಟ್ ಕಾನೂನುಗಳ (ತಿದ್ದುಪಡಿ) ಮಸೂದೆ, 2026 ಕುರಿತ ಜಂಟಿ ಸಮಿತಿಗೆ ರಾಜ್ಯಸಭಾ ಸದಸ್ಯೆ ಡಾ. ಮೇನಕಾ ಗುರುಸ್ವಾಮಿ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.