ಮನೆ ರಾಜ್ಯ ನವ ಕರ್ನಾಟಕ; ಅಭಿವೃದ್ಧಿಯ ಹೊಸದಾರಿ, ರಾಷ್ಟ್ರಕ್ಕೆ ಮಾದರಿ – ಹಸನಾದ ನೇಕಾರರ ಬದುಕು..

ನವ ಕರ್ನಾಟಕ; ಅಭಿವೃದ್ಧಿಯ ಹೊಸದಾರಿ, ರಾಷ್ಟ್ರಕ್ಕೆ ಮಾದರಿ – ಹಸನಾದ ನೇಕಾರರ ಬದುಕು..

0

ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. ಸಶಕ್ತ, ಸಮೃದ್ಧ, ಸ್ವಾಭಿಮಾನಿ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ದೂರ ಕ್ರಮಿಸಿದ್ದೇವೆ, ನಮ್ಮ ಈ ಪ್ರಯತ್ನ ಮುಂದೆ ಇನ್ನಷ್ಟು ಶೀಘ್ರ ಹಾಗೂ ಪರಿಣಾಮಕಾರಿಯಾಗಿರಲಿದೆ. ಈ ಮೂರು ವರ್ಷಗಳಲ್ಲಿ ನಿಮಗಾಗಿ ನಾವು ಸಲ್ಲಿಸಿದ ಸೇವೆಯ ಮಾಹಿತಿ ಹೀಗಿದೆ..

  • ನೇಕಾರ ಸಮ್ಮಾನ್‌ ಯೋಜನೆಯಡಿ 2023-24ನೇ ಸಾಲಿನಲ್ಲಿ 1,44,975 ಫಲಾನುಭವಿಗಳಿಗೆ ₹72.48 ಕೋಟಿ, 2024-25ನೇ ಸಾಲಿನಲ್ಲಿ 1,17,400 ಫಲಾನುಭವಿಗಳಿಗೆ ₹58.70 ಕೋಟಿ, 2025-26ನೇ ಸಾಲಿನಲ್ಲಿ 1,27,186 ಫಲಾನುಭವಿಗಳಿಗೆ ₹63.59 ಕೋಟಿ ಆರ್ಥಿಕ ನೆರವು
  • ಕಳೆದ 3 ವರ್ಷಗಳಲ್ಲಿ ನೇಕಾರರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 9,261 ವಿದ್ಯಾರ್ಥಿಗಳಿಗೆ ₹4.08 ಕೋಟಿ ವಿದ್ಯಾರ್ಥಿವೇತನ ಡಿಬಿಟಿ ಮೂಲಕ ಬಿಡುಗಡೆ ಆಗಿದೆ.
  • ರಾಜ್ಯದ 31 ಜಿಲ್ಲೆಗಳ 1,16,924 ಲಕ್ಷ ನೇಕಾರರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆಯಾಗಿದೆ.