ಭಾರತೀಯ ಕ್ರಿಕೆಟ್ನ ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿತನಾಗಿರುವ 15 ವರ್ಷದ ಯುವ ವೈಭವ್ ಸೂರ್ಯವಂಶಿ ಬಿಗ್ ಆಫರ್ ನೀಡಲಾಗಿದೆ. ಅದು ಕೂಡ ಬರೋಬ್ಬರಿ 12 ಕೋಟಿ ರೂ. ಭರ್ಜರಿ ಆಫರ್. ಪ್ರಮುಖ ಕಾರ್ಪೊರೇಟ್ ಟೈರ್ ಕಂಪೆನಿಯೊಂದು ತಮ್ಮ ಬ್ರ್ಯಾಂಡ್ ಲೋಗೊವನ್ನು ಬ್ಯಾಟ್ ಮೇಲೆ ಪ್ರದರ್ಶಿಸಲು ವೈಭವ್ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವಾರ್ಷಿಕ ಸ್ಪಾನ್ಸರ್ಶಿಪ್ ಆಫರ್ ನೀಡಿದೆ ಎಂದು ವರದಿಯಾಗಿದ್ದು ಇದರ ಜೊತೆಗೆ ಮತ್ತೊಂದು ಟೈರ್ ಕಂಪೆನಿ ಕೂಡ ವೈಭವ್ ಸೂರ್ಯವಂಶಿಯ ಬ್ಯಾಟ್ ಸ್ಪಾನ್ಸರ್ಶಿಪ್ಗಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಅಂದರೆ ಎರಡು ಪ್ರಮುಖ ಕಂಪೆನಿಗಳು ವೈಭವ್ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬ್ಯಾಟ್ ಸ್ಪಾನ್ಸರ್ಶಿಪ್ನಿಂದಾಗಿ ಯುವ ದಾಂಡಿಗ ಕೋಟಿ ರೂ. ಎನಿಸುವುದು ಖಚಿತ ಎಂದೇ ಹೇಳಬಹುದು ಎನ್ನಲಾಗಿದೆ.
ಆದರೆ ಸದ್ಯ ವೈಭವ್ ಸೂರ್ಯವಂಶಿ ಸದ್ಯ ‘SS’ ಕಂಪನಿಯೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ಬ್ಯಾಟ್ ಒಪ್ಪಂದವನ್ನು ಹೊಂದಿದ್ದಾರೆ. 3 ವರ್ಷಗಳ ಹಳೆಯ ಈ ಒಪ್ಪಂದವು ಮುಕ್ತಾಯದ ಹಂತದಲ್ಲಿದೆ. ಈ ಒಪ್ಪಂದವು ಮುಗಿಯುತ್ತಿದ್ದಂತೆ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೆ ಹೊಸ ಕಂಪೆನಿಯ ಹೆಸರು ಕಾಣಿಸಿಕೊಳ್ಳಲಿದೆ. ಆದರೆ ಆ ಕಂಪೆನಿ ಯಾವುದು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಭಾರತ ಸ್ಟಾರ್ ಆಟಗಾರರ ಬ್ಯಾಟ್ ಸ್ಪಾನ್ಸರ್ ಮಾಡುತ್ತಿರುವ ಎರಡು ಕಂಪೆನಿಗಳೇ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬುದ್ದಾಗಿದೆ .

















