ತಿರುಮಲ: ಸುಪಥಂ ಮಾರ್ಗದ ಮೂಲಕ ಅನಿವಾಸಿ ಭಾರತೀಯರು (ಎನ್ಆರ್ಐ)ಗಳು ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಇದ್ದ ದಿನಗಳನ್ನು ಟಿಟಿಡಿ ವಿಸ್ತರಣೆ ಮಾಡಿದ್ದು ಇದಕ್ಕೂ ಮೊದಲು ಅನಿವಾಸಿ ಭಾರತೀಯರು ಭಾರತಕ್ಕೆ ಬಂದ ಬಳಿಕ ವೆಂಕಟೇಶ್ವ ಸ್ವಾಮಿ ದರ್ಶನಕ್ಕೆ ಸುಪಥಂ ಪ್ರವೇಶದವಾರದ ಮೂಲಕ 30 ದಿನಗಳೊಳಗೆ ದರ್ಶನ ಪಡೆಯುವ ಅವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು 90 ದಿನಗಳಿಗೆ ವಿಸ್ತರಿಸಲಾಗಿದೆ. ಅವರು ತಮ್ಮ ಮೂಲ ಪಾಸ್ಪೋರ್ಟ್ ಮತ್ತು ನಕಲು ಪ್ರತಿಗಳನ್ನು ಹಾಜರುಪಡಿಸಿ, ಪರಿಶೀಲನೆಗೆ ಒಳಗಾದ ಬಳಿಕ 300 ರೂ ವಿಶೇಷ ದರ್ಶನದ ಟಿಕೆಟ್ ಪಡೆಯಬಹುದಾಗಿತ್ತು ಎನ್ನಲಾಗುತ್ತಿದೆ.

ಹಾಗೂ ಈ 30 ದಿನಗಳ ಅವಧಿಯ ಟಿಕೆಟ್ ಕೆಲವು ಅನಿವಾಸಿ ಭಾರತೀಯರಿಗೆ ಅನಾನುಕೂಲವಾಗುತ್ತಿದ್ದು, ಈ ಕುರಿತು ಸಲ್ಲಿಕೆಯಾದ ಮೇಲ್ಮನವಿ ಮೇರೆಗೆ ಈ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೂ ‘ಶ್ರೀ ವೆಂಕಟೇಶ್ವರ ಆಪನ್ನ ಹೃದಯ’ ಯೋಜನೆ ಭಕ್ತರಿಗೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಪನ್ನ ಹೃದಯ ಟ್ರಸ್ಟ್ಗೆ 1 ಲಕ್ಷ ದೇಣಿಗೆ ನೀಡಿದ ಪ್ರತಿ ವ್ಯಕ್ತಿಗೆ ಐದು ಬ್ರೇಕ್ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ ಎಂಬುದ್ದಾಗಿದೆ. ಇದರ ಯೋಜನೆ ಲಾಭ ಪಡೆಯಲು ಪ್ರತಿ ದಾನಿಯು ಒಂದು ದಿನ ಮುಂಚಿತವಾಗಿ ಡೋನರ್ ಸೆಲ್ನಲ್ಲಿ 1 ಲಕ್ಷ ರೂ. ದೇಣಿಗೆಯನ್ನು ಪಾವತಿಸಬೇಕು.ನಂತರ ವಿಐಪಿ ಬ್ರೇಕ್ ದರ್ಶನ ಟಿಕೆಟ್ಗಾಗಿ ಪ್ರತಿ ವ್ಯಕ್ತಿಗೆ 500 ರೂ. ಪಾವತಿಸಬೇಕು. ಈ ಉದ್ದೇಶಕ್ಕಾಗಿ ಟಿಟಿಡಿ ಡೋನರ್ ಸೆಲ್ನಲ್ಲಿ ಮೀಸಲಾದ ಕೌಂಟರ್ ಸ್ಥಾಪಿಸಿದೆ ಎಂದು ಟಿಟಿಡಿ ತಿಳಿಸಿದೆ.

ಆದರಿಂದ ಶ್ರೀವಾಣಿ ಟ್ರಸ್ಟ್ಗೆ ಕೊಡುಗೆ ನೀಡಿದ ಭಕ್ತರಿಗೆ ಮೀಸಲಾದ ದೈನಂದಿನ ಕೋಟಾವನ್ನು ಪರಿಚಯಿಸಿದೆ. ದರ್ಶನ ಪ್ರವೇಶವನ್ನು ಸುಗಮಗೊಳಿಸುವ ಮತ್ತು ದಾನಿಗಳಿಗೆ ಅನುಕೂಲತೆಯನ್ನು ಸುಧಾರಿಸುವ ಗುರಿಯೊಂದಿಗೆ ಈ ವ್ಯವಸ್ಥೆ ಜಾರಿಗೆ ತಂದಿದ್ದು, ಇದು ಜೂನ್ 10 ರಿಂದ ಜಾರಿಗೆ ಬರಲಿದೆ. ಸದ್ಯ ಟಿಟಿಡಿ ಪ್ರತಿದಿನ 1,500 ಶ್ರೀವಾಣಿ ದರ್ಶನ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡುತ್ತದೆ. ಇವುಗಳಲ್ಲಿ 500 ಟಿಕೆಟ್ಗಳನ್ನು ಮೂರು ತಿಂಗಳ ಮುಂಚಿತವಾಗಿ ಆನ್ಲೈನ್ನಲ್ಲಿ ಮುಂಗಡ ಬುಕಿಂಗ್ಗಾಗಿ ನಿಗದಿಪಡಿಸಲಾಗಿದೆ. ಆದರೆ, ಇನ್ನೂ 200 ಟಿಕೆಟ್ಗಳನ್ನು ಪ್ರಸ್ತುತ ತಿರುಪತಿ ವಿಮಾನ ನಿಲ್ದಾಣದಲ್ಲಿ ಆನ್ – ದಿ-ಸ್ಪಾಟ್ ಬುಕಿಂಗ್ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತಿದೆ. ಉಳಿದ 800 ಟಿಕೆಟ್ಗಳನ್ನು ದೈನಂದಿನ ಬುಕಿಂಗ್ ಕೋಟಾದಡಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
















