ಮನೆ ಸುದ್ದಿ ಜಾಲ 12 ಮಂದಿಸಾವು  : ಸಾಹಸಿಗರೊಂದಿಗೆ ಹೊರಟ ಲಘು ವಿಮಾನ ಪತನ

12 ಮಂದಿಸಾವು  : ಸಾಹಸಿಗರೊಂದಿಗೆ ಹೊರಟ ಲಘು ವಿಮಾನ ಪತನ

0

ಬಟ್ಲರ್(ಯುಎಸ್ಎ): ರೋಮಾಂಚಕಾರಿ ಸಾಹಸ ಕ್ರೀಡೆ ಸ್ಕೈ ಡೈವಿಂಗ್‌ಗಾಗಿ ಜನರನ್ನು ಹೊತ್ತೊಯ್ಯುತ್ತಿದ್ದ ಲಘು ವಿಮಾನವೊಂದು ಪತನಗೊಂಡು ಪೈಲಟ್‌ ಸೇರಿ ಎಲ್ಲ 12 ಜನರು ಸಾವನ್ನಪ್ಪಿದ ಘಟನೆ ಅಮೆರಿಕದ ಮಿಸ್ಸೌರಿಯಲ್ಲಿ ಭಾನುವಾರ ಸಂಭವಿಸಿದೆ. ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಸಮೀಪ ವಿಮಾನ ಪತನಗೊಂಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸ್ಕೈಡೈವಿಂಗ್ ಮಾಡಲು ಜನರು ವಿಮಾನದಲ್ಲಿ ಹೋಗುತ್ತಿದ್ದರು ಎಂದು ಮಿಸೌರಿ ಹೆದ್ದಾರಿ ಗಸ್ತು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇದೇ ಭಾನುವಾರ ಬೆಳಿಗ್ಗೆ 11:30ರ ಸುಮಾರಿಗೆ ವಿಮಾನ ಪತನಗೊಂಡು ಹೊತ್ತಿ ಉರಿಯುತ್ತಿತ್ತು ಎಂದು ತುರ್ತು ರಕ್ಷಣಾ ಸಿಬ್ಬಂದಿಗೆ ಕರೆ ಬಂತು. ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಆದರೆ ಯಾರೂ ಬದುಕಿಳಿಯಲಿಲ್ಲ. ಅಲ್ಲಿನ ಚಿತ್ರಣ ಭೀಕರವಾಗಿತ್ತು ಎಂದು ಹೇಳಿರುವ ಅಧಿಕಾರಿ, ಈ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತದೆ ಎಂದು ಹೇಳಿದರು. ಅಪಘಾತಕ್ಕೀಡಾದ ಪೆಸಿಫಿಕ್ ಏರೋಸ್ಪೇಸ್ 750XL ಒಂದೇ ಎಂಜಿನ್ ಹೊಂದಿರುವ ಟರ್ಬೊಪ್ರೊಪ್ ವಿಮಾನವಾಗಿದೆ.

ಇದು ಸ್ಕೈಡೈವಿಂಗ್‌ಗೆ ಹೆಚ್ಚು ಜನಪ್ರಿಯ. ಸರಕು, ವೈಮಾನಿಕ ಸಮೀಕ್ಷೆ ಮತ್ತು ವೈದ್ಯಕೀಯ ಸ್ಥಳಾಂತರಿಸುವ ಸೇರಿದಂತೆ ಇತರ ಬಳಕೆಗಳಿಗೆ ಈ ವಿಮಾನ ಸಹಕಾರಿ ಎಂದು ವರದಿಯಾಗಿದೆ. 2010ರಲ್ಲಿ ತಯಾರಿಸಲಾದ ಈ ವಿಮಾನವು 17 ಸ್ಕೈಡೈವರ್‌ಗಳನ್ನು ಹೊತ್ತೊಯ್ಯಬಲ್ಲದು. ಸಣ್ಣ ರನ್‌ವೇಗಳಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯ ಹೊಂದಿದೆ ಎಂದು ಎಫ್‌ಎಎ ದಾಖಲೆಗಳು ತಿಳಿಸಿವೆ ಎಂಬುದ್ದಾಗಿದೆ.