ಜಮ್ಮು-ಕಾಶ್ಮೀರ(Jammukashmir): ಜಮ್ಮು-ಕಾಶ್ಮೀರದ ಪೊಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾನುವಾರ ತಡರಾತ್ರಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಗ್ರೇನೆಡ್ ಸ್ಪೋಟಗೊಂಡಿದ್ದು, ಅಲ್ಲಿನ ಸೇನಾ ಕ್ಯಾಪ್ಟನ್ ಹಾಗೂ ನೈಬ್ ಸುಬೇದಾರ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಗ್ರೇನೆಡ್ ಸ್ಪೋಟ ಸಂಭವಿಸಿದೆ.
ನಂತರ ಕೊಡಲೇ ಸೇನಾ ಕ್ಯಾಪ್ಟನ್ ಮತ್ತು ನೈಬ್ ಸುಬೇದಾರ್ ಅವರನ್ನು ಕೂಡಲೇ ಉದಮ್ ಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನೈಬ್ ಸುಬೇದಾರ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.