ಮನೆ ಆರೋಗ್ಯ ಶೀತ, ಕೆಮ್ಮಿನ ತಕ್ಷಣ ಪರಿಹಾರಕ್ಕೆ ಲವಂಗ ಸಹಕಾರಿ

ಶೀತ, ಕೆಮ್ಮಿನ ತಕ್ಷಣ ಪರಿಹಾರಕ್ಕೆ ಲವಂಗ ಸಹಕಾರಿ

0

ಮಳೆಗಾಲದಲ್ಲಿ ನೆಗಡಿ ಮತ್ತು ಕೆಮ್ಮು ತುಂಬಾ ಕಾಡುತ್ತದೆ. ಬದಲಾಗುತ್ತಿರುವ ಋತುವಿನಲ್ಲಿ, ಜನರು ಶೀತ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ ಮತ್ತು ಈ ಸಂದರ್ಭದಲ್ಲಿ ಲವಂಗವು ಅವರಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.
ಲವಂಗವು ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಲವಂಗದಲ್ಲಿ ಪ್ರೋಟೀನ್, ಕಬ್ಬಿಣ, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ ಮತ್ತು ಸೋಡಿಯಂ ಸಮೃದ್ಧವಾಗಿದೆ. ಲವಂಗದಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನಿಮಗೆ ಶೀತ ಅಥವಾ ಕೆಮ್ಮು ಅಥವಾ ಗಂಟಲು ನೋವು ಇದ್ದರೆ ನಿಮ್ಮ ಬಾಯಿಯಲ್ಲಿ 1 ಅಥವಾ 2 ಲವಂಗವನ್ನು ಜಗಿಯಿರಿ. ಆಗ ನೀವು ಶೀತ ಮತ್ತು ಗಂಟಲಿನ ನೋವಿನಿಂದ ತ್ವರಿತ ಪರಿಹಾರವನ್ನು ಪಡೆಯುತ್ತೀರಿ. ಲವಂಗ ನಿಮಗೆ ಇಷ್ಟವಿಲ್ಲದಿದ್ದರೆ ಲವಂಗದ ಎಣ್ಣೆ ಸಹ ಉಪಯುಕ್ತವಾಗಿರುತ್ತದೆ.
ಕೆಮ್ಮಿನ ಸಂದರ್ಭದಲ್ಲಿ ಮಗುವಿಗೆ ಜೇನುತುಪ್ಪ ಮತ್ತು ಲವಂಗವನ್ನು ತಿನ್ನಿಸಿ. ಇದಕ್ಕಾಗಿ, 7-8 ಲವಂಗವನ್ನು ತೆಗೆದುಕೊಂಡು ಅವುಗಳನ್ನು ಪ್ಯಾನ್ ಮೇಲೆ ಲಘುವಾಗಿ ಬಿಸಿ ಮಾಡಿ. ಅದು ತಣ್ಣಗಾದಾಗ ಲವಂಗವನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅದಕ್ಕೆ 3-4 ಚಮಚ ಜೇನುತುಪ್ಪವನ್ನು ಸೇರಿಸಿ.
ಈ ಮಿಶ್ರಣವನ್ನು ದಿನ್ಕಕೆರಡು ಬಾರಿ ತಲಾ ಒಂದು ಚಮಚ ತಿನ್ನಿಸಿ. ಇದು ಕೆಮ್ಮಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಹೀಗೆ ಒಂದೆರಡು ದಿನ ಮಾಡುವುದರಿಂದ ಗಂಟಲಿಗೆ ಸಾಕಷ್ಟು ಆರಾಮ ದೊರೆಯುತ್ತದೆ.
ಅಸಮರ್ಪಕ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರದಿಂದಾಗಿ ಹೆಚ್ಚಿನರು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಅಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಔಷಧಿಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿರುತ್ತದೆ. ಅದರ ಬದಲು ಲವಂಗವನ್ನು ಸೇವಿಸಬಹುದು. 1 ಲೋಟ ನೀರಿನಲ್ಲಿ ಕೆಲವು ಹನಿ ಲವಂಗ ಎಣ್ಣೆಯನ್ನು ಸೇರಿಸಿ ಕುಡಿಯಬಹುದು. ಇದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.