ಮನೆ ಅಪರಾಧ ಬೆಳಗಾವಿ: ಪ್ರೇಯಸಿಯನ್ನು ಕೊಂದು ನೇಣಿಗೆ ಶರಣಾದ ಯುವಕ

ಬೆಳಗಾವಿ: ಪ್ರೇಯಸಿಯನ್ನು ಕೊಂದು ನೇಣಿಗೆ ಶರಣಾದ ಯುವಕ

0

ಬೆಳಗಾವಿ(Belagavi): ಯುವಕರನೋರ್ವ ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ ಘಟನೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ನಡೆದಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಪಚ್ಚಣ್ಣವರ (28) ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಮಚಂದ್ರ ತೆಣಗಿ (26) ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ರಾಮಚಂದ್ರ ತೆಣಗಿ ವಿಶ್ವವಿದ್ಯಾಲಯದ ಹಾಸ್ಟೆಲಿನಲ್ಲಿ ವಾಸವಾಗಿದ್ದು, ರೇಣುಕಾ ಅವರು ಬಸವ ಕಾಲೋನಿಯ ಮನೆಯೊಂದರಲ್ಲಿ ಒಬ್ಬರೇ ಬಾಡಿಗೆ ಮನೆಮಾಡಿಕೊಂಡು ವಾಸಿಸುತ್ತಿದ್ದರು.

ಈ ಮಧ್ಯೆ ಇತ್ತೀಚೆಗೆ ರೇಣುಕಾ ರಾಮಚಂದ್ರನನ್ನು ಕಡೆಗಣಿಸುತ್ತಿದ್ದರು. ಗುರುವಾರ ರಾತ್ರಿ ಪ್ರೇಮಿಗಳಿಬ್ಬರೂ ಇದೇ ಮನೆಯಲ್ಲಿ ಮಾತನಾಡಲು ಸೇರಿದ್ದ ವೇಳೆ ರೇಣುಕಾ ಅವರ ಕುತ್ತಿಗೆಗೆ ಸ್ಕಿಪ್ಪಿಂಗ್ ವೈರಿನಿಂದ ಬಿಗಿದು ಕೊಲೆ ಮಾಡಿದ ಆರೋಪಿ ರಾಮಚಂದ್ರ, ಅದೇ ವೈರಿನಿಂದ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.