ಮನೆ ರಾಜ್ಯ ಮರದ ದಿಮ್ಮಿ ತುಂಬಿದ್ದ ಲಾರಿ ಪಲ್ಟಿ, ಬೈಕ್ ಹಿಂಬದಿ ಸವಾರ ಸಾವು

ಮರದ ದಿಮ್ಮಿ ತುಂಬಿದ್ದ ಲಾರಿ ಪಲ್ಟಿ, ಬೈಕ್ ಹಿಂಬದಿ ಸವಾರ ಸಾವು

0

ಬೆಂಗಳೂರು(Bengaluru): ಲಾರಿಯಲ್ಲಿದ್ದ ಮರದ ದಿಮ್ಮಿಗಳು ಫ್ಲೈಓವರ್ ನಿಂದ ಬೈಕ್ ಮೇಲೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಾಗರಬಾವಿ ರಿಂಗ್ ರಸ್ತೆಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮುಖೇಶ್ ಮೃತ ದುರ್ದೈವಿ. ಈತನ ಜೊತೆಗಿದ್ದ ಡೇವಿಡ್ ಹಾಗೂ ಮತ್ತೊಂದು ಬೈಕ್​​ನಲ್ಲಿ ತೆರಳುತ್ತಿದ್ದ ಶಿವು ಎಂಬಾತನಿಗೂ ಗಂಭೀರ ‌ಗಾಯಗಳಾಗಿವೆ.

ಸುಂಕದಕಟ್ಟೆಯಿಂದ ನಾಗರಬಾವಿ ಕಡೆ ಬರುತ್ತಿದ್ದ ಆಂಧ್ರದ ಲಾರಿ, ಚಾಲಕನ​​​ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿ‌ ಸ್ಕಿಡ್ ಆಗುತ್ತಿದ್ದಂತೆ ಲಾರಿಯಲ್ಲಿದ್ದ ಮರದ ದಿಮ್ಮಿಗಳು‌ ಫ್ಲೈಓವರ್​ ಕೆಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಮಾಕ್ಷಿಪಾಳ್ಯದ ಸಂಚಾರಿ ಪೊಲೀಸ್ ​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.