ಮನೆ ಅಪರಾಧ ಬೆಂಗಳೂರು: ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂ ಹಣ ದೋಚಿ ಕಳ್ಳರು ಪರಾರಿ

ಬೆಂಗಳೂರು: ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂ ಹಣ ದೋಚಿ ಕಳ್ಳರು ಪರಾರಿ

0

ಬೆಂಗಳೂರು(Bengaluru): ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಸುಮಾರು 4.5 ಲಕ್ಷ ರೂ ಹಣ ದೋಚಿ ಕಳ್ಳರು ಪಾರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಲಕ್ಷ್ಮೀಶ್ ಎಂಬುವವರು ಮನೆ ಸಾಲದ ಇಎಂಐ ಕಟ್ಟಲು ಬ್ಯಾಂಕ್​ನಿಂದ ಹಣ ತಂದಿದ್ದರು, ಬ್ಯಾಂಕ್ ನವರು ಪಾನ್ ಕಾರ್ಡ್ ಕೇಳಿದ ಹಿನ್ನೆಲೆಯಲ್ಲಿ ಅವರು ವಾಪಸ್ ಬಂದು ಪಾನ್ ಕಾರ್ಡ್ ತರಲು ಮನೆಗೆ ತೆರಳುವ ವೇಳೆಯಲ್ಲಿ ಕಳ್ಳರು ಬ್ಯಾಂಕ್​ ನಿಂದ 2 ಬೈಕ್​ ಗಳಲ್ಲಿ ಫಾಲೋ ಮಾಡಿ ನಂತರ ಕಾರಿನಲ್ಲಿದ್ಧ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.