ಮನೆ ರಾಷ್ಟ್ರೀಯ ನೇಪಾಳದ ಕಠ್ಮಂಡುವಿನಲ್ಲಿ ಭೂಕಂಪ: ಜನರಲ್ಲಿ ಆತಂಕ

ನೇಪಾಳದ ಕಠ್ಮಂಡುವಿನಲ್ಲಿ ಭೂಕಂಪ: ಜನರಲ್ಲಿ ಆತಂಕ

0

ನೇಪಾಳ(Nepala): ಇಂದು ಬೆಳ್ಳಂಬೆಳಿಗ್ಗೆ ಕಠ್ಮಂಡುವಿನಲ್ಲಿ 4.1 ರಷ್ಟು ತೀವ್ರತೆಯ ಭೂಕಂಪ ಉಂಟಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ನಾಗರ್ ಕೋಟ್ ನಿಂದ 21 ಕಿ.ಮೀ ದೂರದಲ್ಲಿ ಬೆಳಿಗ್ಗೆ 5.50ಕ್ಕೆ ಭೂಕಂಪ ಸಂಭವಿಸಿದ್ದು, ಕೇಂದ್ರವು 10.0 ಆಳದಲ್ಲಿದೆ ಮತ್ತು 27.907 ° ಉತ್ತರ ಅಕ್ಷಾಂಶ ಮತ್ತು 85.573 ° ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಭೂಕಂಪದಲ್ಲಿ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.