ಮನೆ ದೇಶ ಎನ್.ಟಿ. ರಾಮರಾವ್ 4ನೇ ಮಗಳು ಸಾವು: ಆತ್ಮಹತ್ಯೆ ಶಂಕೆ

ಎನ್.ಟಿ. ರಾಮರಾವ್ 4ನೇ ಮಗಳು ಸಾವು: ಆತ್ಮಹತ್ಯೆ ಶಂಕೆ

0

ಹೈದರಾಬಾದ್ (Hyderabad): ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗಿನ ಖ್ಯಾತ ನಟ, ದಿವಂಗತ ಎನ್.ಟಿ. ರಾಮರಾವ್ ಅವರ ನಾಲ್ಕನೇ ಮಗಳು ಉಮಾ ಮಹೇಶ್ವರಿ ಮೃತಪಟ್ಟಿದ್ದಾರೆ.

ಉಮಾ ಮಹೇಶ್ವರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಅವರ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಉಮಾ ಅವರ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಉಮಾ ಮಹೇಶ್ವರಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಖಿನ್ನತೆಗೆ ಒಳಗಾಗಿ ಜೀವ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಉಮಾ ಮಹೇಶ್ವರಿ ಅವರು ಇತ್ತೀಚೆಗೆ ತಮ್ಮ ಮಗಳ ಮದುವೆ ನೆರವೇರಿಸಿದ್ದರು.