ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ದಿನ ಪ್ರಾರಂಭಿಸುವ ಮುನ್ನ ತಪ್ಪದೇ ರಾಶಿ ಭವಿಷ್ಯವನ್ನು ನೋಡಿ. ನಿಮ್ಮಗಿಂದು ಶುಭ ದಿನವೇ, ಅಶುಭ ದಿನವೇ ಎಂಬುದನ್ನು ತಿಳಿದು ರಾಶಿ ಭವಿಷ್ಯದಲ್ಲಿನ ಸೂಚನೆಗಳನ್ನು ಪಾಲಿಸಿ.

ಮೇಷ ರಾಶಿ

ಇಂದು ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತವೆ. ಆದರೆ ನೀವು ಅವುಗಳನ್ನು ನಿಯಂತ್ರಿಸಬೇಕು. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನವನ್ನು ಸುಧಾರಿಸಿ. ಯಾವುದೇ ರೀತಿಯ ತಪ್ಪುಗ್ರಹಿಕೆ ತಪ್ಪಿಸಿ. ಆರ್ಥಿಕ ಲಾಭ ಪಡೆಯಲು ನಿಧಾನವಾಗಬಹುದು. ಅಂದುಕೊಂಡ ಕಾರ್ಯಗಳಿಗೆ ಅಡೆತಡೆಗಳಿರಬಹುದು. ಕುಟುಂಬಸ್ಥರು ಮಾರ್ಗದರ್ಶನ ಪಾಲಿಸುವುದು ಪ್ರಯೋಜನಕಾರಿಯಾಗಿದೆ. ನಿಮ್ಮ ಅದೃಷ್ಟ ನಿಮ್ಮನ್ನು ಕೈ ಹಿಡಿಯುತ್ತದೆ. ಎಷ್ಟೇ ಅಡೆತಡೆಗಳಿದ್ದರೂ ಒಳ್ಳೆಯ ಕಾರ್ಯಗಳು ನಿಮ್ಮನ್ನು ಬೆಂಬಲಿಸುತ್ತವೆ.

ವೃಷಭ ರಾಶಿ

ನೀವು ಇಂದು ಅದ್ಭುತ ದಿನವನ್ನು ಹೊಂದಿರುತ್ತೀರಿ. ನೀವು ದೇವಸ್ಥಾನದ ದರ್ಶನಕ್ಕೆ ಹೋಗಬಹುದು. ಪರಸ್ಪರ ನಂಬಿಕೆಯ ಸಹಾಯದಿಂದ ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ಬಹಳ ದಿನಗಳಿಂದ ಈಡೇರದೇ ಇದ್ದ ನಿಮ್ಮ ಯಾವುದೇ ವಿಶೇಷ ಆಸೆ ಇಂದು ನೆರವೇರಲಿದೆ. ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬಹುದು. ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗಲಿದೆ, ಸಣ್ಣ ಹಾಗೂ ಚಿಲ್ಲರೇ ವ್ಯಾಪಾರಿಗಳ ಜೀವನ ಮಟ್ಟ ಸುಧಾರಿಸಲಿದೆ. ಗ್ರಾಹಕರನ್ನು ಸೆಳೆಯುವ ಶಕ್ತಿ ಹೆಚ್ಚಾಗಲಿದೆ. ಈ ದಿನ ಹೂಡಿಕೆಯನ್ನು ತಪ್ಪಿಸಿ. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ.

ಮಿಥುನ ರಾಶಿ

ನಿಮ್ಮ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚುವ ಸಮಯ. ವೃತ್ತಿಯಲ್ಲಿ ಅನೇಕ ಸವಾಲುಗಳು ಇವೆ. ಧೈರ್ಯದಿಂದ ಮುಂದುವರೆಯಿರಿ. ಮನಸ್ಸಿಗೆ ಅಧೈರ್ಯ ಆದರೂ ಮುಂದೆ ಒಳ್ಳೆಯ ದಿನಗಳು ಖಂಡಿತಾ ಇದೆ. ಸಂತಸದ ದಿನಗಳನ್ನು ಅನುಭವಿಸುತ್ತೀರಿ. ಹಣದ ಹರಿವು ಉತ್ತಮವಾಗಿದೆ. ಶತ್ರುಗಳು ನಿಮ್ಮಿಂದ ದೂರ ಸರಿಯುತ್ತಾರೆ.

ಕರ್ಕಾಟಕ ರಾಶಿ

ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆಯು ನಿಮ್ಮನ್ನು ಪ್ರಚೋದಿಸುತ್ತದೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಯೋಜನೆಯನ್ನು ನೀವು ಮಾಡಬಹುದು. ದಾಂಪತ್ಯ ಜೀವನದಲ್ಲಿ ಆಗುತ್ತಿರುವ ಬಿರುಕುಗಳು ಇಂದು ಕೊನೆಗೊಳ್ಳಲಿದೆ. ಸಂಗಾತಿಯು ಸಂತೋಷವಾಗಿರಲು ಸಾಧ್ಯವಾಗುತ್ತದೆ. ಒಂದೇ ಸ್ಥಳದಲ್ಲಿ ದೀರ್ಘಕಾಲ ಕೆಲಸ ಮಾಡುವವರ ಸಂಬಳದಲ್ಲಿ ಹೆಚ್ಚಳ ಆಗಲಿದೆ. ನಿಮ್ಮ ತಂದೆ ಕೆಲವು ಪ್ರಮುಖ ಕೆಲಸವನ್ನು ನಿಮಗೆ ನೀಡಬಹುದು. ಆರೋಗ್ಯ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತವೆ, ನೀವು ಫಿಟ್ ಆಗುತ್ತೀರಿ.

ಸಿಂಹ ರಾಶಿ

ಇಂದು ನಿಮ್ಮ ಅದೃಷ್ಟದ ನಕ್ಷತ್ರಗಳು ಹೆಚ್ಚಾಗಿರುತ್ತವೆ. ನವವಿವಾಹಿತರ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಸಿಂಹ ರಾಶಿಯವರ ಬುದ್ಧಿಶಕ್ತಿ ವೃದ್ದಿಯಾಗುತ್ತದೆ. ತಾಳ್ಮೆ ಅವರನ್ನು ಸದಾಕಾಲ ಕೈಹಿಡಿಯುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ಹೂಡಿಕೆ ತಪ್ಪಿಸಿ. ಅಂದುಕೊಂಡ ಕಾರ್ಯದಲ್ಲಿ ಅಡೆತಡೆ ಇರುವುದಿಲ್ಲ. ಮಹಿಳೆಯರು ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಹೆಚ್ಚಾಗಲಿದೆ. ಯುವಕರಿಗೆ ಉದ್ಯೋಗವಕಾಶಗಳು ಹುಡಿಕೊಂಡು ಬರಲಿವೆ. ಆಯ್ಕೆಗಳು ಅಧಿಕವಾಗಿರುತ್ತದೆ. ಶುಭಸಮಾರಂಭಗಳು ಮನೆಯಲ್ಲಿ ನಡೆಯಲಿವೆ.

ಕನ್ಯಾ ರಾಶಿ

ನಾನಾ ವಿಧದ ಅನುಕೂಲ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ. ಧನಲಾಭ ಇದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಗಾಬರಿ ಬೇಡ. ತೊಂದರೆಯಿಂದ ಪಾರಾಗುತ್ತೀರಿ. ವಿದೇಶ ಪ್ರಯಾಣವೊಂದು ನಿಮಗಾಗಿ ಕಾಯುತ್ತಿದೆ. ವೃತ್ತಿ ಸಂಬಂಧವಾಗಿ ವಿದೇಶ ಪ್ರಯಾಣ ಒದಗಿ ಬರಬಹುದು. ವ್ಯಾಪಾರಿಗಳಿಗೆ ಲಾಭ ಇದೆ.

ತುಲಾ ರಾಶಿ

ಇಂದು ತುಲಾ ರಾಶಿಯವರು ಉತ್ತಮ ದಿನವನ್ನು ಹೊಂದಿರುತ್ತೀರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಮಕ್ಕಳೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸ್ಮರಣೀಯ ದಿನಗಳನ್ನು ಕಳೆಯುತ್ತೀರಿ. ಹೂಡಿಕೆಯಲ್ಲಿ ಲಾಭ ಸಿಗಲಿದೆ. ಆದರೆ ಅನುಭವಿಗಳ ಸಲಹೆ ಪಡೆಯುವುದು ಉತ್ತಮ. ಕೋಪ, ಮನಸ್ತಾಪಗಳನ್ನು ತಪ್ಪಿಸಿ. ಯಾವುದೇ ಅಪಾಯದ ಚಟುವಟಿಕೆಗಳಿಂದ ದೂರವಿರಿ. ನಿಮ್ಮ ಅಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೋಗಲಾಡಿಸಲು ಪ್ರಯತ್ನಿಸಿ. ನಿಮ್ಮ ಶಕ್ತಿಯನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವುದು ಉತ್ತಮ. ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಆದರೆ ಚಿಂತಿಸುವ ಅಗತ್ಯತೆ ಇಲ್ಲ. ಅದೃಷ್ಟ ನಿಮ್ಮ ಸಮಸ್ಯೆಗಳನ್ನೆಲ್ಲ ದೂರ ಮಾಡುತ್ತದೆ.

ವೃಶ್ಚಿಕ ರಾಶಿ

ಇಂದು ನಿಮ್ಮ ದಿನವು ಅನುಕೂಲಕರವಾಗಿರುತ್ತದೆ. ಸಂಜೆಯ ವೇಳೆಗೆ ಸಣ್ಣ ಔತಣಕೂಟಕ್ಕೆ ಹೋಗಬಹುದು. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಅದು ಮನೆಯ ವಾತಾವರಣವನ್ನು ಸಂತೋಷವಾಗಿಡುತ್ತದೆ. ತಂದೆ ಅಥವಾ ಹಿರಿಯ ವ್ಯಕ್ತಿಯ ಸಲಹೆ ಮತ್ತು ಮಾರ್ಗದರ್ಶನವನ್ನು ಪಾಲಿಸುವುದು ನಿಮಗೆ ಒಳ್ಳೆಯದು. ಕೆಲ ದಿನಗಳಿಂದ ಕುಟುಂಬದಲ್ಲಿ ಇದ್ದ ಮನಸ್ತಾಪಗಳು ದೂರವಾಗುತ್ತವೆ. ಸೋಮಾರಿತನ ನಿಮ್ಮನ್ನು ಆಳಲು ಬಿಡಬೇಡಿ. ಇದು ಈ ಹಿಂದೆ ನೀವು ಕಷ್ಟಪಟ್ಟು ಕೆಲಸ ಮಾಡಿದ ಸಮಯವನ್ನು ಹಾಳು ಮಾಡುತ್ತದೆ. ತಪ್ಪು ಮೋಜಿನಲ್ಲಿ ಸಮಯ ಕಳೆಯುವುದು ವ್ಯರ್ಥ. ವ್ಯಾಪಾರದಲ್ಲಿ ಲಾಭ ಇರಲಿದೆ.

ಧನಸ್ಸು ರಾಶಿ

ಇಂದು ನಿಮ್ಮ ದಿನ ಉತ್ತಮವಾಗಿರುತ್ತದೆ. ಸಂಜೆ ನೀವು ಕುಟುಂಬದ ಸದಸ್ಯರೊಂದಿಗೆ ಕೆಲವು ಪ್ರಮುಖ ವಿಷಯವನ್ನು ಚರ್ಚಿಸುತ್ತೀರಿ. ಪ್ರೀತಿಪಾತ್ರರಿಂದ ಉಡುಗೊರೆಗಳನ್ನು ಪಡೆಯುವಿರಿ.ಮನೆಯ ಹಿರಿಯ ಸದಸ್ಯರ ಆಶೀರ್ವಾದ ಪಡೆಯುವುದು ಮಂಗಳಕರವಾಗಿರುತ್ತದೆ. ಇದರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಸ್ವಲ್ಪ ಮೃದು ಸ್ವಭಾವದಿಂದಿರುವ ನಿಮ್ಮನ್ನು ಎಲ್ಲರೂ ಮೆಚ್ಚುತ್ತಾರೆ. ನೆರೆಹೊರೆಯವರೊಂದಿಗೆ ಸೌಹಾರ್ದಯುತವಾಗಿ ವರ್ತಿಸುತ್ತೀರಿ. ಈ ಸಮಯದಲ್ಲಿ ಯಾವುದೇ ರೀತಿಯ ವ್ಯಾಪಾರ ಪ್ರವಾಸವನ್ನು ತಪ್ಪಿಸಿ. ಪತಿ ಮತ್ತು ಪತ್ನಿ ಪರಸ್ಪರ ತಿಳುವಳಿಕೆ ಹೊಂದಿರುತ್ತಾರೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಮಕರ ರಾಶಿ

ಇಂದು ಮಕರ ರಾಶಿಯವರ ದಿನ ಮಿಶ್ರವಾಗಿರುತ್ತದೆ. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರುತ್ತವೆ. ಪ್ರೀತಿಪಾತ್ರರು ಭೇಟಿ ನೀಡುವ ಯೋಜನೆಯನ್ನು ಮಾಡುತ್ತಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವಿರಿರಿ. ವಿದ್ಯಾರ್ಥಿ ವರ್ಗ ತಮ್ಮ ಅಧ್ಯಯನದ ಬಗ್ಗೆ ಪೋಷಕರು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸುತ್ತಾರೆ. ಅಪರಿಚಿತರೊಂದಿಗೆ ಅತಿಯಾದ ಸಲಹೆ ಬೇಡ. ಈ ಸಮಯದಲ್ಲಿ ಶತ್ರುಗಳಿಂದ ಅಂತರವನ್ನು ಕಾಯ್ದುಕೊಳ್ಳಿ. ಭೂಮಿ ಖರೀದಿ ಅಥವಾ ಮಾರಾಟಕ್ಕೆ ದಿನ ಸರಿಯಿಲ್ಲ. ಶೀತ ಮತ್ತು ಜ್ವರದಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು, ದಿನಚರಿಗೆ ಅಡ್ಡಿಯಾಗಬಹುದು.

ಕುಂಭ ರಾಶಿ

ಇಂದು ಕುಂಭ ರಾಶಿಯವರಿಗೆ ಆಹ್ಲಾದಕರವಾಗಿರುತ್ತದೆ. ಪ್ರೀತಿಪಾತ್ರರು ಇಂದು ನಿಮ್ಮ ಭಾವನೆಗಳನ್ನು ಮೆಚ್ಚುತ್ತಾರೆ. ಅಧಿಕ ವೆಚ್ಚವನ್ನು ತಪ್ಪಿಸಿ. ಏಕೆಂದರೆ ಇದು ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು. ತಾಳ್ಮೆ ಇರಲಿ. ಹೂಡಿಕೆ ಮಾಡುವುದನ್ನು ತಪ್ಪಿಸಿ. ಮಹಿಳೆಯರು ವ್ಯವಹಾರದ ಕಡೆಗೆ ಹೆಚ್ಚು ಗಂಭೀರತೆ ಹೊಂದಿರುತ್ತಾರೆ. ಜೊತೆಗೆ ಕಠಿಣ ಪರಿಶ್ರಮ ಪಡುತ್ತಾರೆ. ಕೆಟ್ಟ ಅಭ್ಯಾಸಗಳು ಮತ್ತು ಕೆಟ್ಟ ಚಟುವಟಿಕೆಗಳಿಂದ ದೂರವಿರುತ್ತಾರೆ. ಈ ರಾಶಿಯ ಮಹಿಳೆಯರು ಇಂದು ಹೆಚ್ಚು ಗೌರವಿಸಲ್ಪಡುತ್ತಾರೆ. ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಬಹುದು.

ಮೀನ ರಾಶಿ

ಇಂದು ನಿಮ್ಮ ಅತ್ಯುತ್ತಮ ದಿನವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಶ್ಲಾಘಿಸಲ್ಪಡುತ್ತೀರಿ. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ತರಕಾರಿ, ಹೂವು, ಹಣ್ಣು ವ್ಯಾಪಾರಿಗಳಿಗೆ ಇಂದು ಮಂಗಳಕರವಾಗಿರುತ್ತದೆ. ಹೆಚ್ಚು ಗ್ರಾಹಕರನ್ನು ಸೆಳೆಯುವ ಶಕ್ತಿ ನಿಮಗಿರುತ್ತದೆ. ಅಂದುಕೊಂಡ ಕಾರ್ಯಗಳು ನಿಮ್ಮನ್ನು ಹೆಚ್ಚು ಪ್ರೋತ್ಸಾಹಿಸುತ್ತವೆ. ಇಟ್ಟ ಹೆಜ್ಜೆ ಹಿಂದೆ ಇಡಬೇಡಿ. ಲಾಭದಾಯಕ ಹುದ್ದೆ ಮಾಡುತ್ತೀರಿ. ನಿಮ್ಮ ಶ್ರಮದ ಫಲ ನಿಧಾನವಾಗಿ ನಿಮ್ಮ ಕೈ ಹಿಡಿಯಲಿದೆ. ಅದೃಷ್ಟ ನಿಮ್ಮ ಕೈ ಬಿಡುವುದಿಲ್ಲ. ನಿಮ್ಮ ಜಾಣ್ಮಯ ನಡೆ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತದೆ.