ಮನೆ ರಾಜ್ಯ ಮೈಸೂರು: ಗಾಳಿಗೆ ಮುರಿದು ಬಿದ್ದ ಬ್ಯಾರಿಕೇಡ್’ಗಳು

ಮೈಸೂರು: ಗಾಳಿಗೆ ಮುರಿದು ಬಿದ್ದ ಬ್ಯಾರಿಕೇಡ್’ಗಳು

0

ಮೈಸೂರು(Mysuru): ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮಳೆಯೊಂದಿಗೆ ಹೆಚ್ಚಾಗಿ ಗಾಳಿಯು ಬೀಸುತ್ತಿದ್ದು, ಪರಿಣಾಮ  ಪೊಲೀಸ್ ಇಲಾಖೆಯಿಂದ ರಸ್ತೆಯಲ್ಲಿ ಹಾಕಲಾಗಿರುವ ಬ್ಯಾರಿಕೇಡ್ ಗಳು ಮುರಿದು ಬಿದ್ದಿವೆ.

ಸಂಚಾರ ಪೊಲೀಸರು ವಾಹನಗಳ ವೇಗ ನಿಯಂತ್ರಣಕ್ಕೆ  ರಿಂಗ್ ರಸ್ತೆಯ ರಿಂಗ್ ರಸ್ತೆಯಿಂದ ಅಕ್ಕಪಕ್ಕದ ಬಡವಣೆಗಳಿಗೆ ತೆರಳುವ ತಿರುವುಗಳಲ್ಲಿ  ಅಳವಡಿಸಿರುವ ಬ್ಯಾರಿಕೇಡ್ ಗಳು ಮುರಿದುಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯವಹಿಸಿದ್ದಾರೆ.

ಬ್ಯಾರಿಕೇಡ್ ಕಾಣಿಸದ  ಹಿನ್ನೆಲೆ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಅಪಘಾತ ನಡೆಯುವ ಮುನ್ನ ಎಚ್ಚೆತ್ತುಕೊಂಡು ಮುರಿದುಬಿದ್ದಿರುವ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ, ಹೊಸ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.