ನವದೆಹಲಿ (New Delhi): ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸೇನೆಗೆ ಪ್ರಮುಖ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರು.
Future Infantry Soldier As A System (F-INSAS) ನ ಭಾಗವಾಗಿ ಯೋಧರು ರಷ್ಯಾ ನಿರ್ಮಿತ, ಎಕೆ-203 ಅಸಾಲ್ಟ್ ರೈಫಲ್ ಗಳನ್ನು ಪಡೆಯಲಿದ್ದಾರೆ. 300 ಮೀಟರ್ ದೂರದಲ್ಲಿರುವ ಗುರಿಯನ್ನು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ರೈಫಲ್ ನ್ನು ರಷ್ಯಾ-ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಉತ್ತರ ಪ್ರದೇಶದ ಅಮೇಠಿಯಲ್ಲಿ ತಯಾರಾಗಲಿದೆ.
ಪ್ರಮುಖ ಆಧುನಿಕ ಶಸ್ತ್ರಾಸ್ತ್ರಗಳಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆ, ಕ್ಷಿಪ್ರ ಪ್ರತಿಕ್ರಿಯೆ ಹೋರಾಟದ ವಾಹನಗಳು, ಗಸ್ತು ಬೋಟ್, F-INSAS ವ್ಯವಸ್ಥೆ, ನಿಪುಣ್-ಲ್ಯಾಂಡ್ ಮೈನ್ಸ್, ಎಲ್‌ಸಿಎ ಸೇನೆಯ ಭತ್ತಳಿಕೆಗಳನ್ನು ಸೇರಿರುವ ಹೊಸ ಶಸ್ತ್ರಾಸ್ತ್ರಗಳಿವೆ.
F-INSAS ನ ಭಾಗವಾಗಿ ಸಿಬ್ಬಂದಿಗಳನ್ನು ಸುರಕ್ಷಿತವಾಗಿರಿಸುವ ಸಾಗಣೆ ವಾಹನಗಳು, ಸ್ವಯಂಚಾಲಿತ ಸಂವಹನ ವ್ಯವಸ್ಥೆ, ಬ್ಯಾಲಿಸ್ಟಿಕ್ ಹೆಲ್ಮೆಟ್, ಬ್ಯಾಲಿಸ್ಟಿಕ್ ಕನ್ನಡಕ, ಬುಲೆಟ್ ಪ್ರೂಫ್ ಜಾಕೆಟ್, ಥರ್ಮಲ್ ಇಮೇಜರ್ ಗಳು, ಟ್ಯಾಂಕ್ ಗಳಿಗೆ ಅತ್ಯಾಧುನಿಕ ದೃಶ್ಯ ವ್ಯವಸ್ಥೆ, ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ (LCA) ಸ್ವದೇಶಿ ನಿರ್ಮಿತ ದೋಣಿಗಳನ್ನು ನೀಡಲಾಗಿದೆ.
ಉಗ್ರ ನಿಗ್ರಹಕ್ಕೆ ಭಾರತೀಯ ಸೇನೆ ಪುಣೆಯ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ ಸಹಯೋಗದಲ್ಲಿ ನಿಪುಣ್ ಸ್ಫೋಟಕವನ್ನು ತಯಾರಿಸಿದ್ದು, ನಿಪುಣ್ ಮೇಲೆ ಕಾಲಿಟ್ಟಾಗ ಅದು ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.
ಚೀನಾ ಗಡಿ ಭಾಗದಲ್ಲಿ ಎಲ್‌ಸಿಎ ನಿಯೋಜನೆಗೊಳ್ಳಲಿದ್ದು, ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ಶಸ್ತ್ರಾಸ್ತ್ರಗಳು ಸಹಕಾರಿಯಾಗಿವೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.