ನವದೆಹಲಿ(Newdelhi): ದೇಶದ ಭದ್ರತೆ ಬಗ್ಗೆ ತಪ್ಪು ಸಂದೇಶ ಹರಡುತ್ತಿದ್ದ ಭಾರತದ 7 ಮತ್ತು ಪಾಕಿಸ್ತಾನದ 1 ಯೂಟ್ಯೂಬ್ ಚಾನಲ್‌ಗಳನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಿಷೇಧಿಸಲಾಗಿದೆ.
ಗುರುವಾರ ಗೂಗಲ್ ಒಡೆತನದ ಯೂಟ್ಯೂಬ್ ಗುರುವಾರ ಈ ಕ್ರಮ ಕೈಗೊಂಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಸಾರ ಇಲಾಖೆ ತಿಳಿಸಿದೆ.
ನಿಷೇಧಕ್ಕೊಳಗಾದ ಈ 8 ಚಾನಲ್‌ಗಳು ತಪ್ಪು ಮಾಹಿತಿ, ದ್ವೇಷ ಹರಡುವಿಕೆ, ರಾಷ್ಟ್ರೀಯ ಭದ್ರತೆ ಬಗ್ಗೆ ಸವಾಲು, ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವುದನ್ನು, ಕೋಮು ಭಾವನೆ ಕೆರಳಿಸುವುದನ್ನು, ವಿದೇಶಾಂಗ ನೀತಿಗೆ ದಕ್ಕೆ ತರುವುದನ್ನು ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ.
ನಿಷೇಧಕ್ಕೊಳಗಾಗಿರುವ ಈ ಎಂಟೂ ಚಾನಲ್‌ಗಳು ಸುಮಾರು 85 ಲಕ್ಷ ಚಂದಾದಾರರನ್ನು ಹೊಂದಿದ್ದು, ಇಲ್ಲಿವರೆಗೆ 114 ಕೋಟಿ ವೀಕ್ಷಣೆಗಳನ್ನು ಪಡೆದಿವೆ.
ನಿಷೇಧಕ್ಕೆ ಒಳಗಾದ ಚಾನಲ್‌ಗಳು
ಲೋಕತಂತ್ರ ಟಿ.ವಿ –12 ಲಕ್ಷ ಚಂದಾದಾರರು
ಯು ಆ್ಯಂಡ್ ವಿ ಟಿವಿ– 10.20 ಲಕ್ಷ ಚಂದಾದಾರರು
ಎಎಂ ರಾಜ್ವಿ ಚಾನಲ್– 95000 ಚಂದಾದಾರರು
ಗೌರವಶಾಲಿ– 7 ಲಕ್ಷ ಚಂದಾದಾರರು
ಸೀಟಾಪ್ 5ಟಿಎಚ್– 20 ಲಕ್ಷ ಚಂದಾದಾರರು
ಸರ್ಕಾರಿ ಅಪ್ಡೇಟ್– 90 ಸಾವಿರ ಚಂದಾದಾರರು
ಸಬ್ ಕುಚ್ ದೇಕೊ– 20 ಲಕ್ಷ ಚಂದಾದಾರರು
ನ್ಯೂಸ್ ಕಿ ದುನಿಯಾ (ಪಾಕಿಸ್ತಾನದ ಚಾನಲ್)– 20 ಲಕ್ಷ ಚಂದಾದಾರರು