ಮೈಸೂರು(Mysuru):ಜೆಡಿಎಸ್ ವೆಬ್ಸೈಟ್ನಿಂದ ಜಿ.ಟಿ.ದೇವೇಗೌಡರ ಫೋಟೋ, ಹೆಸರನ್ನು ತೆಗೆದುಹಾಕಲಾಗಿದ್ದು, ಹೊಸ ಬೆಳವಣಿಗೆಗೆ ಮುನ್ನುಡಿ ದೊರೆತಿದೆ.
ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರೂ ಜಿಟಿಡಿ ಅವರ ಫೋಟೋ ಮತ್ತು ಹೆಸರನ್ನು ಪಕ್ಷದ ಎಲ್ಲಾ ಪೋಸ್ಟರ್ ನಿಂದಲೂ ತೆಗೆಯಲಾಗುತ್ತಿದೆ. ಜೆಡಿಎಸ್ ಅಧಿಕೃತ ವೆಬ್ಸೈಟ್ನಲ್ಲಿ ಜೆಡಿಎಸ್ ನ ಎಲ್ಲಾ ಶಾಸಕರು ಮತ್ತು ಸಂಸದರ ಫೋಟೋಗಳು ಮತ್ತು ಹೆಸರುಗಳಿವೆ. ಆದರೆ ಜಿ.ಟಿ.ದೇವೇಗೌಡರ ಹೆಸರೇ ಇಲ್ಲ.
https://jds.ind.in/ ಹೆಸರಿನಲ್ಲಿ ಪಕ್ಷ ಸಂಘಟನೆಯ ಅಧಿಕೃತ ವೆಬ್ಸೈಟ್ ರಚನೆ ಮಾಡಲಾಗಿದೆ. ಈ ವೆಬ್ಸೈಟ್ನಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರ ಹೆಸರು ಹಾಗೂ ಕಚೇರಿ ವಿಳಾಸದ ಜತೆಗೆ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಮಾಹಿತಿ ನೀಡಲಾಗಿದೆ.
ಸದರಿ ವೆಬ್ಸೈಟ್ ನಲ್ಲಿ ಜೆಡಿಎಸ್ ಹಿರಿಯ ಶಾಸಕರಾಗಿರುವ ಜಿ.ಟಿ.ದೇವೇಗೌಡರ ಕುರಿತ ಸಣ್ಣ ಮಾಹಿತಿಯೂ ಇಲ್ಲ. ಮೈಸೂರಿನ ಶಾಸಕ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವು ಅವರ ಸಂಪೂರ್ಣ ಮಾಹಿತಿ ಈ ವೆಬ್ಸೈಟ್ನಲ್ಲಿದೆ. ಈಗಾಗಲೇ ಮೈಸೂರು ಭಾಗದ ಜೆಡಿಎಸ್ ಮುಖಂಡರ ಜಾಹೀರಾತು ಫಲಕದಲ್ಲಿ ಜಿಟಿಡಿ ಅವರ ಫೋಟೋ ತೆಗೆಯಲಾಗಿದೆ.
ದೇವೇಗೌಡರ ಬೆಂಬಲಿಗರು ಅದರಲ್ಲೂ ಮೈಸೂರಿನ ಗ್ರಾಮಾಂತರ ಭಾಗದ ಜನರು ತಮ್ಮ ನಾಯಕನ ಮುಂದಿನ ನಡೆ ಏನು ಎಂದು ತಿಳಿಯುವ ಕುತೂಹಲದಲ್ಲಿದ್ದಾರೆ. ಕ್ಷೇತ್ರದಲ್ಲಿ ಅವರಿಗಿರುವ ಪ್ರಭಾವವನ್ನು ಪರಿಗಣಿಸಿ ಜೆಡಿಎಸ್ ಮುಖಂಡ ಹಾಗೂ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿ ಪಕ್ಷದಲ್ಲಿಯೇ ಉಳಿಯುವಂತೆ ಮನವಿ ಮಾಡಿದ್ದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.