ಮನೆ ರಾಷ್ಟ್ರೀಯ ಬಿಜೆಪಿಯೊಂದಿಗೆ  ತಮ್ಮ ಪಕ್ಷವನ್ನೇ  ವಿಲೀನಗೊಳಿಸಲು ಮುಂದಾದ ಗೋವಾ ಕಾಂಗ್ರೆಸ್ ಶಾಸಕರು

ಬಿಜೆಪಿಯೊಂದಿಗೆ  ತಮ್ಮ ಪಕ್ಷವನ್ನೇ  ವಿಲೀನಗೊಳಿಸಲು ಮುಂದಾದ ಗೋವಾ ಕಾಂಗ್ರೆಸ್ ಶಾಸಕರು

0

ಪಣಜಿ(Panaji): ಬಿಜೆಪಿಯೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಬೇಕೆಂಬ ನಿರ್ಣಯವನ್ನು ಗೋವಾದ ಕಾಂಗ್ರೆಸ್ ಶಾಸಕರು ಕೈಗೊಂಡಿದ್ದಾರೆ.

8 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಡೆ ಹೇಳಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕರ ನಿರ್ಣಯ ಅಂಗೀಕಾರ ಬೆಳಕಿಗೆ ಬಂದಿದೆ.

ವಿರೋಧ ಪಕ್ಷದ ನಾಯಕ ಮೈಕಲ್ ಲೋಬೊ ಅವರು ಇತರ ಏಳು ಶಾಸಕರ ಜೊತೆ ಈ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಶಾಸಕ ದಿಗಂಬರ್ ಕಾಮತ್ ಇದನ್ನು ಅಂಗೀಕರಿಸಿದ್ದಾರೆ.

ಇದಕ್ಕೂ ಮುನ್ನ ಈ ಎಂಟು ಶಾಸಕರು ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದರು. 40 ಶಾಸಕ ಸದಸ್ಯತ್ವ ಬಲದ ಗೋವಾ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿತ್ತು. 2019 ರಲ್ಲೂ ಕೂಡ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಜಿಗಿದಿದ್ದರು.