ಸೂರತ್(Soorath): ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬುದು ತಪ್ಪು ಮಾಹಿತಿ. ಹಿಂದಿ ಭಾಷೆಯು ಪ್ರತಿಸ್ಪರ್ಧಿಯಲ್ಲ, ದೇಶದ ಎಲ್ಲ ಭಾಷೆಗಳ ಮಿತ್ರ ಭಾಷೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೂರತ್ನ ಅಖಿಲ ಭಾರತ ಅಧಿಕೃತ ಭಾಷೆಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದಿ ಜೊತೆ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೆಲವರು ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳು ಪರಸ್ಪರ ಪ್ರತಿಸ್ಪರ್ಧಿ ಎಂಬ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಹಿಂದಿ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ. ದೇಶದ ಎಲ್ಲ ಭಾಷೆಗಳ ಮಿತ್ರ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎಲ್ಲಿಯವರೆಗೆ ನಾವು ಭಾಷೆಗಳ ಸಹಬಾಳ್ವೆಯನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ, ನಮ್ಮ ಭಾಷೆಯಲ್ಲಿ ದೇಶವನ್ನು ನಡೆಸುವ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ. ಅದು ನಮ್ಮ ಗುರಿಯಾಗಬೇಕು ಎಂದು ನಾನು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ. ಎಲ್ಲಾ ಭಾಷೆಗಳನ್ನು ಮತ್ತು ಮಾತೃಭಾಷೆಗಳನ್ನು ಸಮೃದ್ಧವಾಗಿ ಇರಿಸಬೇಕು. ಈ ಎಲ್ಲಾ ಭಾಷೆಗಳ ಏಳಿಗೆಯಿಂದ ಮಾತ್ರ ಹಿಂದಿ ಏಳಿಗೆಯಾಗಲಿದೆ ಎಂದು ಹೇಳಿದರು.
ಪ್ರಜ್ವಲ್ ವಿರುದ್ಧ ಪಕ್ಷದಿಂದ ಕ್ರಮ…
ಹಾಸನದಲ್ಲಿ ಅಭ್ಯರ್ಥಿ ಗೆಲ್ತಾರೆ, ಅದರಲ್ಲಿ ಸಂಶಯ ಇಲ್ಲ…..
ಕುಟುಂಬದ ಹೆಸರು ತರಬೇಡಿ
ಬಾಲ್ಕನಿಯಿಂದ ಅಪಾರ್ಟ್ಮೆಂಟ್ನ ಛವಣಿಗೆ ಬಿದ್ದ ಮಗು ರಕ್ಷಣೆ.
ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.