ಮನೆ ರಾಷ್ಟ್ರೀಯ ಗುಜರಾತ್: 8 ತಿಂಗಳಲ್ಲಿ 50 ಮಂದಿಗೆ ಮರಣ ದಂಡನೆ

ಗುಜರಾತ್: 8 ತಿಂಗಳಲ್ಲಿ 50 ಮಂದಿಗೆ ಮರಣ ದಂಡನೆ

0

ಅಹಮದಾಬಾದ್‌(Ahmadabad): ಈ ವರ್ಷದ 8 ತಿಂಗಳಲ್ಲಿ (ಜನವರಿಯಿಂದ ಆಗಸ್ಟ್‌)  50 ಮಂದಿಗೆ ಗುಜರಾತ್‌ನ ವಿಚಾರಣಾಧೀನ ನ್ಯಾಯಾಲಯಗಳು ಮರಣ ದಂಡನೆ ಶಿಕ್ಷೆ ವಿಧಿಸಿವೆ.

2006ರಿಂದ 2011ರ ಅವಧಿಯಲ್ಲಿ ಒಟ್ಟು 46 ಜನರಿಗೆ ಮರಣ ದಂಡನೆ ವಿಧಿಸಲಾಗಿತ್ತು ಎಂಬುದು ನ್ಯಾಯಾಲಯದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ 38 ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಈ ವರ್ಷದ ಫೆಬ್ರುವರಿಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಇದನ್ನು ಬಿಟ್ಟರೆ ಅ‍ಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಕೆಲ ಅಪರಾಧಿಗಳಿಗೆ ರಾಜ್ಯದ ವಿವಿಧ ನಗರಗಳ ವಿಚಾರಣಾಧೀನ ನ್ಯಾಯಾಲಯಗಳು ಮರಣ ದಂಡನೆ ಶಿಕ್ಷೆ ನೀಡಿವೆ. ಎಂಟು ತಿಂಗಳ ಅವಧಿಯಲ್ಲಿ ಮರ್ಯಾದೆ ಹತ್ಯೆ ಪ್ರಕರಣದಡಿ ಇಬ್ಬರು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.