ಮನೆ ಮನರಂಜನೆ ಅಯೋಧ್ಯೆಯಲ್ಲಿ ಆದಿಪುರುಷ್ ಸಿನಿಮಾ ಟೀಸರ್ ರಿಲೀಸ್ ಆಗುವ ಸಾಧ್ಯತೆ

ಅಯೋಧ್ಯೆಯಲ್ಲಿ ಆದಿಪುರುಷ್ ಸಿನಿಮಾ ಟೀಸರ್ ರಿಲೀಸ್ ಆಗುವ ಸಾಧ್ಯತೆ

0

ಹೈದರಾಬಾದ್‌(Hydarabad): ತೆಲುಗಿನ ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ‘ಆದಿಪುರುಷ್’ ಸಿನಿಮಾದ ಟೀಸರ್‌ ‘ಅಯೋಧ್ಯೆ‘ಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸುವ ನಿರೀಕ್ಷೆ ಇದೆ.

ಆದರೆ ಸಿಎಂ ಯೋಗಿ ಭಾಗವಹಿಸುವ ಬಗ್ಗೆ ಚಿತ್ರತಂಡ ಇನ್ನು ಖಚಿತಪಡಿಸಿಲ್ಲ.

‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೃತಿ ಸನನ್ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ನಡುವೆ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಪೌರಾಣಿಕ ಕಥಾ ಹಂದರವುಳ್ಳ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಆದಿಪುರುಷ್‘ 2023ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಆದಿಪುರುಷ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಟಿ ಸೀರೀಸ್ ಪ್ರೊಡಕ್ಷನ್ ಕಂಪನಿ ಈ ಚಿತ್ರವನ್ನು ಸುಮಾರು ₹500 ಕೋಟಿ ವೆಚ್ಚದಲ್ಲಿ ರ್ಮಾಣ ಮಾಡುತ್ತಿದೆ. ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸಿನಿಮಾ ನಿರ್ದೇಶಿಸಿದ್ದ ಓಂ ರಾವುತ್ ‘ಆದಿಪುರುಷ್’ ನಿರ್ದೇಶನ ಮಾಡುತ್ತಿದ್ದಾರೆ.

ಇದು 3ಡಿ ಯಲ್ಲಿ ಮೂಡಿಬರುತ್ತಿರುವುದು ವಿಶೇಷ.