ಮನೆ ಮನರಂಜನೆ ನಿರ್ದೇಶಕ ರಾಜಮೌಳಿ ಜೊತೆ ಸಿಎಎ ಒಪ್ಪಂದ

ನಿರ್ದೇಶಕ ರಾಜಮೌಳಿ ಜೊತೆ ಸಿಎಎ ಒಪ್ಪಂದ

0

ನವದೆಹಲಿ(Newdelhi): ಭಾರತದ ಬಹು ಬೇಡಿಕೆಯ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರೊಂದಿಗೆ ಅಮೆರಿಕದ ಕ್ರಿಯೆಟಿವ್‌ ಆರ್ಟಿಸ್ಟ್‌ ಏಜೆನ್ಸಿ (ಸಿಎಎ) ಒಪ್ಪಂದ ಮಾಡಿಕೊಂಡಿದೆ.

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಈ ವರ್ಷದ ಮಾರ್ಚ್‌ 24ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ನೆಟ್‌ಫ್ಲಿಕ್ಸ್’ನಲ್ಲಿ ಸತತ 10 ವಾರ ಟ್ರೆಂಡ್‌ ಸೃಷ್ಟಿಸಿದ್ದ ಇಂಗ್ಲಿಷ್‌’ಯೇತರ ಭಾಷೆಯ ಸಿನಿಮಾ ಎಂಬ ಹೆಗ್ಗಳಿಕೆಗೂ ಭಾಜನವಾಗಿತ್ತು.

‘ಆರ್‌ಆರ್‌ಆರ್‌’ಗೂ ಮುನ್ನ ರಾಜಮೌಳಿ ನಿರ್ದೇಶಿಸಿದ್ದ, ಬಾಹುಬಲಿ ಚಾಪ್ಟರ್‌–1 ಹಾಗೂ ಚಾಪ್ಟರ್‌–2 ಸಹ ಭಾರಿ ಗಳಿಕೆ ಕಂಡಿದ್ದವು. ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಮಹೇಶ್‌ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸಲಿದ್ದಾರೆ.

ಸಿಎಎಗೆ ರಾಜಮೌಳಿ ಸಹಿ ಹಾಕಿರುವುದು ಹಾಲಿವುಡ್‌ ಏಜೆನ್ಸಿಗಳಿಗೆ ಭಾರತದತ್ತ ಒಲವು ಹೆಚ್ಚುತ್ತಿರುವುದಕ್ಕೆ ಉದಾಹರಣೆಯಾಗಿದೆ ಎಂದು ಡೆಡ್‌ಲೈನ್‌ ವರದಿಯಲ್ಲಿ ಉಲ್ಲೇಖಿಸಿದೆ.

ಕಳೆದ ವರ್ಷ ದೀಪಿಕಾ ಪಡುಕೋಣೆ ಅವರು ಇಂಟರ್‌ನ್ಯಾಷನಲ್ ಕ್ರಿಯೆಟಿವ್ ಮ್ಯಾನೇಜ್‌ಮೆಂಟ್‌ (ಐಸಿಎಂ) ಹಾಗೂ ಆಲಿಯಾ ಭಟ್‌ ವಿಲ್ಲಿಯಂ ಮೋರಿಸ್‌ ಎಂಡೀವೌರ್‌ (ಡಬ್ಲ್ಯುಎಂಇ) ಎಜೆನ್ಸಿಗೆ ಸಹಿ ಮಾಡಿದ್ದರು.