ಮನೆ ಅಪರಾಧ ಕೆ.ಆರ್.ಆಸ್ಪತ್ರೆಯಲ್ಲಿ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್ ಕಳ್ಳತನ ಮಾಡಿದ್ದ ಆರೋಪಿ ಬಂಧನ

ಕೆ.ಆರ್.ಆಸ್ಪತ್ರೆಯಲ್ಲಿ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್ ಕಳ್ಳತನ ಮಾಡಿದ್ದ ಆರೋಪಿ ಬಂಧನ

0

ಮೈಸೂರು(Mysuru): ಕೆ.ಆರ್.ಆಸ್ಪತ್ರೆಯಲ್ಲಿ 4 ಲಕ್ಷ ರೂ ಬೆಲೆ ಬಾಳುವ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್ (Pressure Injector Monitor Tab) ಕಳ್ಳತನ ಮಾಡಿದ್ದ ಆರೋಪಿಯನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ನಗರದ ಕೆ.ಆರ್.ಆಸ್ಪತ್ರೆಯ ಸ್ಕಾನಿಂಗ್ ರೂಂ ನಲ್ಲಿ ಪ್ಲಾನಿಂಗ್ ಮಾಡಲು – ಅಳವಡಿಸಿದ್ದ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್ ಕಳ್ಳತನವಾದ ಕುರಿತು ಇದೇ ತಿಂಗಳ 13 ರಂದು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ದೇವರಾಜ ಪೊಲೀಸರು ತಾಂತ್ರಿಕ ಸಾಕ್ಷಾಧಾರಗಳನ್ನು ಕಲೆ ಹಾಕಿ ಆರೋಪಿಯನ್ನು  ಕೇವಲ ಮೂರು ದಿನಗಳಲ್ಲಿ ದಸ್ತಗಿರಿ ಮಾಡಿ ಆತನಿಂದ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್ ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಗೀತ ಎಂ.ಎಸ್, ಐ.ಪಿ.ಎಸ್ ಹಾಗೂ ದೇವರಾಜ ವಿಭಾಗದ ಎ.ಸಿ.ಪಿ ಶಿಧರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿಗಳು ಮಾಡಿರುತ್ತಾರೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಪ್ರಶಂಸಿಸಿರುತ್ತಾರೆ.

ಹಿಂದಿನ ಲೇಖನಬೆಂಗಳೂರಿನ ಬೀದಿ ಬದಿಯ ಗೋಡೆಗೆ ಪೇಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ನಾಯಕರು
ಮುಂದಿನ ಲೇಖನನಿರ್ದೇಶಕ ರಾಜಮೌಳಿ ಜೊತೆ ಸಿಎಎ ಒಪ್ಪಂದ