ಬೆಂಗಳೂರು(Bengaluru): ಮೈದಾನದಲ್ಲಿ ಪ್ರತಿಸ್ಪರ್ಧಿಯಾಗಿದ್ದರೂ ತಮ್ಮ ಆಪ್ತ ಸ್ನೇಹಿತ ರೋಜರ್ ಫೆಡರರ್ ಟೆನಿಸ್ ಕ್ರೀಡೆಗೆ ನಿವೃತ್ತಿ ಸಲ್ಲಿಸುತ್ತಿರುವುದನ್ನು ರಫೆಲ್ ನಡಾಲ್ ಅವರಿಗೆ ಅರಗಿಸಿಕೊಳ್ಳಲಾಗದೇ ಕಣ್ಣೀರಿಟ್ಟರು.
ಇದನ್ನೇ ಹಂಚಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಂದು ನಾನು ನೋಡಿರುವ ಪೈಕಿ ಅತ್ಯಂತ ಸುಂದರವಾದ ಕ್ರೀಡಾ ಚಿತ್ರ (ಕ್ಷಣ) ಎಂದು ಬಣ್ಣಿಸಿದ್ದಾರೆ.
ಪ್ರತಿಸ್ಪರ್ಧಿಗಳು ಒಬ್ಬರನ್ನೊಬ್ಬರಿಗಾಗಿ ಈ ರೀತಿ ಭಾವನಾತ್ಮಕ ಕ್ಷಣವನ್ನು ಹಂಚುತ್ತಾರೆಂದು ಯಾರಾದರೂ ಯೋಚಿಸಿದ್ದೀರಾ? ಇದುವೇ ಕ್ರೀಡೆಯ ಸೌಂದರ್ಯ. ಇಂದು ನನ್ನ ಪಾಲಿಗೆ ಅತ್ಯಂತ ಸುಂದರ ಕ್ರೀಡಾ ಚಿತ್ರವಾಗಿದೆ. ನಿಮ್ಮ ಜೊತೆಗಾರ ನಿಮಗಾಗಿ ಅತ್ತಾಗ, ದೇವರು ಕರುಣಿಸಿದ ಪ್ರತಿಭೆಯಿಂದ ನಿಮಗೇನು ಮಾಡಲು ಸಾಧ್ಯವಾಯಿತು ಎಂಬುದು ಮನದಟ್ಟಾಗುತ್ತದೆ. ಅವರಿಬ್ಬರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಲೇವರ್ ಕಪ್ನಲ್ಲಿ ಸೋಲಿನೊಂದಿಗೆ ರೋಜರ್ ಫೆಡರರ್ ವಿದಾಯ ಸಲ್ಲಿಸಿದರು.
ಸ್ವಿಸ್ ದಿಗ್ಗಜನ ಕೊನೆಯ ಬಾರಿ ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ವಿದಾಯದ ಕ್ಷಣದಲ್ಲಿ ಫೆಡರರ್ ಹಾಗೂ ನಡಾಲ್ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅತಿ ಹೆಚ್ಚು ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.