ಮನೆ ಸುದ್ದಿ ಜಾಲ ಮಹಾರಾಜ ಟ್ರೋಫಿ : ಕೋಸ್ಟಲ್ ಕಿಂಗ್ಸ್ ತಂಡ ಹೊಸ ಜೆರ್ಸಿ

ಮಹಾರಾಜ ಟ್ರೋಫಿ : ಕೋಸ್ಟಲ್ ಕಿಂಗ್ಸ್ ತಂಡ ಹೊಸ ಜೆರ್ಸಿ

0

ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಆಯೋಜಿಸುವ ಮಹಾರಾಜ ಟ್ರೋಫಿ ಟಿ20ಯಲ್ಲಿ ಈ ಬಾರಿ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡದ ನಾಯಕನಾಗಿ ಕರುಣ್‌ ನಾಯರ್‌ ಮತ್ತು ಉಪನಾಯಕನಾಗಿ ಶ್ರೇಯಸ್‌ ಗೋಪಾಲ್‌ ಆಯ್ಕೆಯಾಗಿದ್ದಾರೆ. ಭಾನುವಾರ ಮಂಗಳೂರಿನ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆರ್ಸಿ ಅನಾವರಣ ಮತ್ತು ತಂಡದ ಥೀಮ್‌ ಸಾಂಗ್‌ ಬಿಡುಗಡೆ ಮಾಡಿ, ನಾಯಕರ ಹೆಸರು ಪ್ರಕಟಿಸಲಾಯಿತು. ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡದ ಮಾಲೀಕತ್ವವನ್ನು ಮಾನ್ಯತಾ ಡೆವಲಪ​ರ್ಸ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ಹಾಗೂ ಜೂ.20ರಿಂದ ಜು.12ರ ವರೆಗೆ ಪಂದ್ಯಗಳು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಮೈದಾನಗಳಲ್ಲಿ ನಡೆಯಲಿವೆ. ಕರ್ನಾಟಕ ಸ್ಟೇಟ್‌ ಕ್ರಿಕೆಟ್‌ ಅಸೋಸಿಯೇಶನ್‌ ಮಂಗಳೂರು ವಲಯದ ಅಧ್ಯಕ್ಷ ಡಾ.ಶ್ರೀಕಾಂತ್‌ ರೈ ಮಾತನಾಡಿ, ತಳಮಟ್ಟದಿಂದ ಕ್ರಿಕೆಟ್‌ ಉತ್ತೇಜಿಸುವ ಹಾಗೂ ಯುವ ಪ್ರತಿಭೆಗಳನ್ನು ಬೆಳೆಸುವ ಸಲುವಾಗಿ ಮುಂದಿನ ದಿನಗಳಲ್ಲಿ ಶಾಲಾ ಮಟ್ಟದಲ್ಲೇ ಕ್ರಿಕೆಟ್‌ ಆಯೋಜಿಸುವ ಕುರಿತು ಕೆಎಸ್‌ಸಿಎ ಚಿಂತನೆ ನಡೆಸುತ್ತಿದೆ. ಎಂದರು.

ಈ ಕುರಿತು ನಟ, ನಿರ್ದೇಶಕ ರೂಪೇಶ್‌ ಶೆಟ್ಟಿ ಮಾತನಾಡಿ, ಕೆ.ಎಲ್‌.ರಾಹುಲ್ ಕ್ರಿಕೆಟ್‌ ಕ್ಷೇತ್ರದಲ್ಲಿ ಮಂಗಳೂರಿಗರಿಗೆ ಮಾದರಿ. ಅವರಂತಹ ಪ್ರತಿಭೆಗಳು ಇಲ್ಲಿಂದ ಮೂಡಿಬರಬೇಕು ಎಂಬುದೇ ನಮ್ಮ ಉದ್ದೇಶ ಎಂದರು. ಕೆಎಸ್‌ಸಿಎ ಖಜಾಂಜಿ ಬಿಎನ್‌ ಮಧುಕರ್‌, ಕೆಎಸ್‌ಸಿಎ ಅವಿನಾಶ್‌ ವೈದ್ಯ, ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ಟೀಮ್‌ ಓನರ್‌ ವಿನೋದ್‌ ನಾಯ್ಡು ಮತ್ತಿತರರು ಇದ್ದರು. ಶರ್ಮಿಳಾ ಸ್ವಾಗತಿಸಿ, ನಿರೂಪಿಸಿದರು ಎಂಬುದ್ದಾಗಿದೆ.