ಮನೆ ರಾಜ್ಯ ದಸರಾ: ಜಂಬೂಸವಾರಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ

ದಸರಾ: ಜಂಬೂಸವಾರಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ

0

ಮೈಸೂರು(Mysuru) : ನಾಡಹಬ್ಬ ದಸರಾ ಮಹೋತ್ಸವದ  ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು. ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆಗಾಗಿ 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕೀರ್ತಿ ಪೊಲೀಸರು ನಿಗ ವಹಿಸಲಿದ್ದಾರೆ. ಮೆರವಣಿಗೆ ಭದ್ರತೆಗಾಗಿ ಮೈಸೂರು ನಗರದ 1255 ಪೊಲೀಸರು, ಹೊರ ಜಿಲ್ಲೆಗಳಿಂದ 3580 ಗೃಹ ರಕ್ಷಕ ದಳದ 650 ಸಿಬ್ಬಂದಿಗಳು ಇದ್ದಾರೆ. ಒಟ್ಟಾರೆಯಾಗಿ 5485 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.