ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ), ಲಷ್ಕರ್ ಎ ತಯಬಾ (ಎಲ್ಇಟಿ) ಮತ್ತು ಇತರ ಸಂಘಟನೆಗಳಿಗೆ ಸೇರಿದ 10 ಮಂದಿಯನ್ನು ಭಯೋತ್ಪಾದಕರು ಎಂದು ಕೇಂದ್ರ ಗೃಹ ಸಚಿವಾಲಯ ಹೆಸರಿಸಿದೆ.
ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.
1. ಹಬಿಬುಲ್ಲಾ ಮಲಿಕ್ ಅಲಿಯಾಸ್ ಸಾಜಿದ್ ಜಟ್, ಪಾಕಿಸ್ತಾನದ ನಾಗರಿಕ
2. ಬಸಿತ್ ಅಹ್ಮದ್ ರೆಶಿ, ಬಾರಾಮುಲ್ಲಾ
3. ಇಮ್ತಿಯಾಜ್ ಅಹ್ಮದ್ ಕಂಡೂ ಅಲಿಯಾಸ್ ಸಾಜದ್, ಸೊಪೋರ್
4. ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಮ್, ಪೂಂಜ್
5. ಜಮೀಲ್ ಉರ್ ರೆಹ್ಮನ್ ಅಲಿಯಾಸ್ ಶೇಖ್ ಸಾಹಬ್, ಪುಲ್ವಾಮಾ
6. ಬಿಲಾಲ್ ಅಹ್ಮದ್ ಬೇಗ್ ಅಲಿಯಾಸ್ ಬಾಬರ್, ಶ್ರೀನಗರ
7. ರಫಿಕ್ ನೈ ಅಲಿಯಾಸ್ ಸುಲ್ತಾನ್, ಪೂಂಚ್
8. ಈರ್ಶಾದ್ ಅಹ್ಮದ್ ಅಲಿಯಾಸ್ ಈದ್ರೀಸ್, ದೊಡಾ
9. ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಜ್, ಕುಪ್ವಾರಾ
10. ಶೋಕತ್ ಅಹ್ಮದ್ ಶೇಖ್ ಅಲಿಯಾಸ್ ಶೋಕತ್ ಮೋಚಿ, ಬಾರಾಮುಲ್ಲಾ
ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವವರ ಪೈಕಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳಾಗಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಮಾಹಿತಿ ನೀಡಿದೆ.