ಮನೆ Uncategorized ಮತ್ತೆಂದು ಬರಬೇಡ ಗೆಳತಿ ನನ್ನೆದುರಿಗೆ

ಮತ್ತೆಂದು ಬರಬೇಡ ಗೆಳತಿ ನನ್ನೆದುರಿಗೆ

0

ಮತ್ತೆಂದು ಬರಬೇಡ

ಗೆಳತಿ ನನ್ನೆದುರಿಗೆ, ಸವಿದ ಕ್ಷಣಗಳ

ನೆನಪುಗಳೇ ಸಾಕು, ಉಳಿದಿಹ ಬದುಕು

ಕಳೆದುಬಿಡಲು ನನಗೆ.

ನನ್ನ ನೀ ಆದರಿಸದಿದ್ದರೂ

ಚಿಂತೆಯಿಲ್ಲ ಗೆಳತಿ ಇರಿವವರ ಕೂಡಿ ಜರಿದು

ಘಾಸಿಗೊಳಿಸದಿರು ಎದೆಯ.

ನಡು ನೀರಿನಲ್ಲಿ ಬಿಟ್ಟು ಹೋದವಳನ್ನು

ನಲಿವಿನ ಅರಮನೆಯಲ್ಲಿ

ಕಂಡಾಗ, ಕಂಗಳ ಅಂಚಿನಲಿ ಜಿನುಗಿದ್ದು ಕಂಬನಿಯಲ್ಲ,

ನೀನು ನೆಮ್ಮದಿಯಿಂದ ಇರೆಹೆಂಬ ಸಂತೃಪ್ತಿಯ ಆನಂದ ಭಾಷ್ಪ.