ಮನೆ ಅಂತಾರಾಷ್ಟ್ರೀಯ ದಿನವಿಡೀ ಪ್ರಲಾಪ ಮಾಡಿದರೂ ಅದರ ಬೆಲೆ 8 ಡಾಲರ್: ಎಲಾನ್ ಮಸ್ಕ್

ದಿನವಿಡೀ ಪ್ರಲಾಪ ಮಾಡಿದರೂ ಅದರ ಬೆಲೆ 8 ಡಾಲರ್: ಎಲಾನ್ ಮಸ್ಕ್

0

ನವದೆಹಲಿ(Newdelhi): ಸಾಮಾಜಿಕ ಮಾಧ್ಯಮ ಟ್ವಿಟರ್‌ನ ವೇರಿಫೈಡ್‌ ಖಾತೆಗಳ ‘ಬ್ಲೂ ಟಿಕ್‌’ಗೆ ಶುಲ್ಕ ವಿಧಿಸುವ ತಮ್ಮ ನಿಲುವನ್ನು ಸಂಸ್ಥೆಯ ನೂತನ ಮಾಲೀಕ ಇಲಾನ್‌ ಮಸ್ಕ್‌ ಶನಿವಾರ ಮತ್ತೆ ಸಮರ್ಥಿಸಿಕೊಂಡಿದ್ದಾರೆ.

‘ಬ್ಲೂ ಟಿಕ್‌’ಗೆ 8 ಡಾಲರ್‌ ಶುಲ್ಕ ವಿಧಿಸುವ ಬಗ್ಗೆ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಈಗಾಗಲೇ ಮಸ್ಕ್‌ ಅವರನ್ನು ಸಾಕಷ್ಟು ಟೀಕಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಅವರು, “ದಿನವಿಡಿ ನನ್ನ ವಿರುದ್ಧ ಪ್ರಲಾಪ ಮಾಡಿ. ಆದರೆ ಅದರ (ಬ್ಲೂ ಟಿಕ್‌) ಬೆಲೆ 8 ಡಾಲರ್‌” ಎಂದು ಮಸ್ಕ್ ಶನಿವಾರ ಖಂಡಾತುಂಡವಾಗಿ ಹೇಳಿದರು.