ಮನೆ ರಾಷ್ಟ್ರೀಯ ಗುಜರಾತ್ ವಿಧಾನಸಭೆ ಚುನಾವಣೆ: 6 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಗುಜರಾತ್ ವಿಧಾನಸಭೆ ಚುನಾವಣೆ: 6 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

0

ಅಹಮದಾಬಾದ್‌: ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತೆ 6 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಈ ಮೂಲಕ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದಂತಾಗಿದೆ. ಒಟ್ಟು 182 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 9 ರಂದು 160 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಎರಡನೇ ಲಿಸ್ಟ್ ಪ್ರಕಾರ ಭಾವನಗರ್ ಪೂರ್ವ ಕ್ಷೇತ್ರದಿಂದ ಸೇಜಲ್ ಪಾಂಡ್ಯಾ, ದೋರಾಜಿ ಕ್ಷೇತ್ರದಿಂದ ಮಾಜಿ ವಿಸಿ ಮಹೇಂದ್ರ ಪಡಾಲಿಯಾ, ಕಂಬಾಲಿಯಾದಿಂದ ಮುಳು ಬೆರಾ ಅವರನ್ನು ಕುತಿಯಾನ್‌ದಿಂದ ದಿಲೀಬೆನ್ ಒಡೆದ್ರಾ ಅವರನ್ನು , ಚೋರಾಸಿಯಿಂದ ಸಂದೀಪ್ ದೇಸಾಯಿ ಅವರನ್ನು ಹಾಗೂ ದೇಡಿಯಾಪಡ್‌’ದಿಂದ (ಎಸ್‌ಟಿ) ಹಿತೇಶ್ ವಾಸವ್ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ 9 ರಂದು ಬಿಡುಗಡೆ ಮಾಡಿತ್ತು. 38 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.

ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ರಂದು ಮೊದಲ ಹಂತದ ಮತದಾನ, ಡಿ.5 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.