ಮನೆ ಮನರಂಜನೆ 400 ಕೋಟಿ ಕಲೆಕ್ಷನ್ ಮಾಡಿದ `ಕಾಂತಾರ’

400 ಕೋಟಿ ಕಲೆಕ್ಷನ್ ಮಾಡಿದ `ಕಾಂತಾರ’

0

ರಿಷಬ್ ಶೆಟ್ಟಯ  ‘ಕಾಂತಾರ’ ರಿಲೀಸ್ ಆಗಿ 50 ದಿನಗಳನ್ನು ಪೂರೈಸಿದ್ದು, 400 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ಬರೆದಿದೆ.

ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ ತೆರೆಕಂಡಿದ್ದ ಸಿನಿಮಾ ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತ್ತು. ಮೊದಲು ವಿಶ್ವದಾದ್ಯಂತ ಕನ್ನಡದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೆ, ಬೇರೆ ಬೇರೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಬಂದಿದ್ದರಿಂದ ಮತ್ತೆ ನಾಲ್ಕು ಭಾಷೆಗಳಿಗೆ ಡಬ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು.

ಕರ್ನಾಟಕದಲ್ಲಿ ‘ಕಾಂತಾರ’ ಭರ್ಜರಿಯಾಗಿ ಸದ್ದು ಮಾಡುತ್ತಿದ್ದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಥಿಯೇಟರ್‌ಗಳು ತುಂಬಿ ತುಳುಕುತ್ತಿದ್ದಂತೆ ಇನ್ನೊಂದು ಕಡೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಾಕ್ಸಾಫೀಸ್ ಲೂಟಿ ಮಾಡುವುದಕ್ಕೆ ಶುರು ಮಾಡಿತ್ತು.

ಇನ್ನೇನು 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ ‘ಕಾಂತಾರ’ ವಿಶ್ವದಾದ್ಯಂತ ₹400 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡ್ತಿರೋ ‘ಕಾಂತಾರ’ ವಿಶ್ವದಾದ್ಯಂತ 400 ಕೋಟಿ ರೂ. ಕಲೆಕ್ಷನ್ ಮಾಡಿದ್ದರೂ, ಕರ್ನಾಟಕದ ಬಾಕ್ಸಾಫೀಸ್‌’ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಇದೂವರೆಗೂ ರಿಷಬ್ ಸಿನಿಮಾ ಸುಮಾರು 168.50 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿಯೇ ಹೆಚ್ಚು ಎಂದು ಹೇಳಲಾಗುತ್ತಿದೆ.

ಇದೂವರೆಗೂ ‘ಕಾಂತಾರ’ ಹಿಂದಿ ವರ್ಷನ್ ಸುಮಾರು 80 ಕೋಟಿ ರೂ. ಕಲೆ ಹಾಕಿದೆ ಎನ್ನಲಾಗಿದೆ. ಇದರೊಂದಿಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ 60 ಕೋಟಿ ರೂ. ತಮಿಳುನಾಡಿನಲ್ಲಿ 12.70 ಕೋಟಿ ರೂ. ಕೇರಳದಲ್ಲಿ 19.20 ಕೋಟಿ ರೂ. ಹಾಗೇ ವಿದೇಶದಲ್ಲಿ ಸುಮಾರು 44.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇವೆಲ್ಲವನ್ನೂ ಸೇರಿಸಿ ಸುಮಾರು 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.