Saval TV on YouTube
ಚರಿತ್ರೆ
ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು.
“ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ…”
ನಂಗೇನು ಚರಿತ್ರೆಗೊತ್ತಿಲ್ವಾ… ಭೂಮಿ ಗುಂಡಾಗಿದೆ. ಅವನು ನನ್ನ ಕೈಗೆ ಸಿಗದೇ ಎಲ್ಲಿ ಹೋಗ್ತಾನೆ…”
*****
ಎಲ್ಲಿಗೆ
ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..” ಮಾಣಿ: “ಅವರಿಲ್ಲಾ ಸಾರ್”
ಗಿರಾಕಿ: “ಎಲ್ಲಿ ಹೋಗಿದ್ದಾರೆ?”
ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು..”
*****
ಗಾದೆ
ಕನ್ನಡ ಮೇಷ್ಟ್ರು: “ಕಂಡದ್ದು ಕಂಡಹಾಗೆ ಹೇಳಿದ್ರೆ ಕೆಡದಂತಹ ಕೋಪ” ಈ ಗಾದೆ ಮಾತಿಗೊಂದು ಉದಾಹರಣೆ ಕೊಡು.
ಶೀಲಾ: “ನಿಮ್ಮ ಅಂಗಿ ಹರಿದು ಹೋಗಿದೆ”
*****














