ಮನೆ ಆರೋಗ್ಯ ರಾಜ್ಯದಲ್ಲಿ ಮಳೆ, ಶೀತಗಾಳಿ: ಮಕ್ಕಳು, ವೃದ್ಧರು ಎಚ್ಚರಿಕೆಯಿಂದಿರುವಂತೆ ಸಚಿವ ಸುಧಾಕರ್ ಸಲಹೆ

ರಾಜ್ಯದಲ್ಲಿ ಮಳೆ, ಶೀತಗಾಳಿ: ಮಕ್ಕಳು, ವೃದ್ಧರು ಎಚ್ಚರಿಕೆಯಿಂದಿರುವಂತೆ ಸಚಿವ ಸುಧಾಕರ್ ಸಲಹೆ

0

ಬೆಂಗಳೂರು(Bengaluru): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಮ್ಯಾಂಡಾಸ್ ಚಂಡಮಾರುತದಿಂದಾಗಿ ನೆರೆಯ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಯಲ್ಲಿ ಮಳೆ, ಶೀತಗಾಳಿ ಹೆಚ್ಚಾಗಿದ್ದು ಮಕ್ಕಳು, ವೃದ್ಧರು ತುಂಬಾ ಎಚ್ಚರಿಕೆಯಿಂದಿರುವಂತೆ  ಆರೋಗ್ಯ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಚಳಿಗಾಲದ ಜೊತೆ ಚಂಡಮಾರುತದ ಪರಿಣಾಮ ಎದುರಿಸುತ್ತಿದ್ದೇವೆ. ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ಹೀಗಾಗಿ ಮಕ್ಕಳು, ವೃದ್ಧರು ತುಂಬಾ ಎಚ್ಚರಿಕೆಯಿಂದ ಇರಬೇಕು. ವೃದ್ಧರನ್ನು, ಮಕ್ಕಳನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೂ ಮುಂಜಾಗ್ರತಾ ಕ್ರಮ ವಹಿಸಲು ಈಗಾಗಲೇ ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗ ಸಭೆ ಕರೆದು ವೈದ್ಯರಿಗೂ ಸೂಚನೆ ಕೊಡುತ್ತೇನೆ. ಈ  ವಾತಾವರಣದಿಂದ  ಕೊರೋನಾ ಉಲ್ಬಣವಾಗುವುದಿಲ್ಲ ಎಂದು ಹೇಳಿದರು.