ಮನೆ ರಾಷ್ಟ್ರೀಯ ಬಸ್–ಟ್ರಕ್ ನಡುವೆ ಭೀಕರ ಅಪಘಾತ: 6 ಮಂದಿ ಸಾವು- 20 ಕ್ಕೂ ಹೆಚ್ಚು ಮಂದಿಗೆ ಗಾಯ

ಬಸ್–ಟ್ರಕ್ ನಡುವೆ ಭೀಕರ ಅಪಘಾತ: 6 ಮಂದಿ ಸಾವು- 20 ಕ್ಕೂ ಹೆಚ್ಚು ಮಂದಿಗೆ ಗಾಯ

0

ಉತ್ತರ ಪ್ರದೇಶ(Uttar Pradesh): ಬಸ್ – ಟ್ರಕ್ ನಡುವಿನ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿರುವ ಘಟನೆ ಫಿರೋಜಾಬಾದ್’ನಲ್ಲಿ ಇಂದು ನಡೆದಿದೆ.

ಲುಧಿಯಾನ ಮತ್ತು ರಾಯ್ ಬರೇಲಿಯಯಿಂದ 50 ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿದ್ದ ಬಸ್ಸಿಗೆ ಆಗ್ರಾ-ಲಖನೌ ದಾರಿಯಲ್ಲಿ ಟ್ರಕ್ ಢಿಕ್ಕಿ ಹೊಡೆದಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 21 ಮಂದಿ ಪ್ರಯಣಿಕರಿಗೆ ಗಾಯಗಳಾಗಿವೆ.

ಬುಧವಾರ ಮುಂಜಾನೆ 4:30 ರ ವೇಳೆ ಈ ಘಟನೆ ನಡೆದಿದ್ದು, ಚಾಲಕ ಬಸ್ ಚಲಾಯಿಸುವಾಗ ಸ್ವಲ್ಪ ನಿದ್ರೆಯಲ್ಲಿ ತೂಕಡಿಸುತ್ತಿದ್ದರು. ಒಮ್ಮೆಗೆ ಬಂದು ಟ್ರಕ್ ಬಸ್ಸಿನ ಹಿಂಬದಿಗೆ ಢಿಕ್ಕಿಯಾಗಿದ್ದರಿಂದ ಬಸ್ ಪಲ್ಟಿಯಾಗಿದೆ ಎಂದು ವರದಿ ತಿಳಿಸಿದೆ.

ಘಟನಾ ಸ್ಥಳದಿಂದ ಬಸ್ಸನ್ನು ತೆರವುಗೊಳಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.