ಮನೆ ಸುದ್ದಿ ಜಾಲ ಒಂದೇ ಕುಟುಂಬದ ಆರು ಜನರ ಸಾವು , ಬದುಕುಳಿದ ಎರಡೂವರೆ ವರ್ಷದ ಮಗು : ಭೀಕರ...

ಒಂದೇ ಕುಟುಂಬದ ಆರು ಜನರ ಸಾವು , ಬದುಕುಳಿದ ಎರಡೂವರೆ ವರ್ಷದ ಮಗು : ಭೀಕರ ರಸ್ತೆ ಅಪಘಾತ

0

ಬಿಕಾನೆರ್ (ರಾಜಸ್ಥಾನ): ಜಿಲ್ಲೆಯ ಶ್ರೀದುಂಗರ್‌ಗಢ ಪ್ರದೇಶದ ಹೇಮಾಸರ್ ಫೌಂಟೇನ್ ಬಳಿ ಇಂದು ಸಂಭವಿಸಿದ ಲಾರಿ ಹಾಗೂ ಕಾರು ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನರು ದುರಂತ ಸಾವು ಕಂಡಿದ್ದಾರೆ. ಪವಾಡಸದೃಶ ರೀತಿಯಲ್ಲಿ ಎರಡೂವರೆ ವರ್ಷದ ಮಗು ಬದುಕುಳಿದಿದೆ. ಡಿಕ್ಕಿ ಹೊಡೆತಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಅದರಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತರೆಲ್ಲರೂ ಹರಿಯಾಣದ ಫತೇಹಾಬಾದ್ ಪ್ರದೇಶದ ನಿವಾಸಿಗಳು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಬಿ.ಎಲ್. ಮೀನಾ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದರ ಕುರಿತ್ತಾಗಿ ಫತೇಹಾಬಾದ್ ಮೂಲದ ಓಂ ಪ್ರಕಾಶ್ ಬಿಷ್ಣೋಯ್ ಎಂಬುವರ ಕುಟುಂಬ ಕಾರಿನಲ್ಲಿ ದೇವರ ದರ್ಶನಕ್ಕೆ ಎಂದು ಮುಕಾಮ್‌ಗೆ ತೆರಳಿತ್ತು. ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ದುರ್ಘಟನೆಯಲ್ಲಿ ಕುಟುಂಬದ ಆರು ಜನ ಮೃತಪಟ್ಟರೆ, ಎರಡೂವರೆ ವರ್ಷದ ಮಗು ಬದುಕುಳಿದಿದೆ. ಮೃತರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಎಸ್​ಪಿ ಮೀನಾ ಪ್ರತಿಕ್ರಿಯಿಸಿದ್ದಾರೆ. ಬಿಕಾನೆರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚ್ವಾ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಾಗೂ ಅಪಘಾತದ ಸುದ್ದಿ ಬೇಸರ ತರಸಿದೆ. ಯಾರದ್ದು ತಪ್ಪು ಎಂಬುವುದು ಸದ್ಯಕ್ಕೆ ಗೊತ್ತಾಗಿಲ್ಲ. ಅಪಘಾತಕ್ಕೆ ನಿಜವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ತಕ್ಷಣ ಶ್ರೀದುಂಗರ್‌ಗಢ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ದಾರಿ ಮಧ್ಯೆಯೇ ಆರು ಮಂದಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎರಡೂವರೆ ವರ್ಷದ ಮಗು ಬದುಕುಳಿದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಶವಗಳನ್ನು ಉಪ-ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಅವರ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಬಿಕಾನೆರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ತಿಳಿಸಿದ್ದಾರೆ ಎಂಬುದ್ದಾಗಿದೆ.