ಮನೆ ತಂತ್ರಜ್ಞಾನ ಹೊಸ ವರ್ಷಕ್ಕೆ ಸ್ಯಾಮ್’ಸಂಗ್ ನೂತನ ಸ್ಮಾರ್ಟ್ ಫೋನ್ ಬಿಡುಗಡೆ

ಹೊಸ ವರ್ಷಕ್ಕೆ ಸ್ಯಾಮ್’ಸಂಗ್ ನೂತನ ಸ್ಮಾರ್ಟ್ ಫೋನ್ ಬಿಡುಗಡೆ

0

ಬೆಂಗಳೂರು(Bengaluru): ಸ್ಯಾಮ್‌’ಸಂಗ್ ಜನಪ್ರಿಯ ಪ್ರೀಮಿಯಂ ಸ್ಮಾರ್ಟ್‌’ಫೋನ್ ಎಸ್ ಸರಣಿಯಲ್ಲಿ ನೂತನ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಎಸ್ ಸರಣಿಯಲ್ಲಿ ಗ್ಯಾಲಕ್ಸಿ ಎಸ್‌23 ಬಿಡುಗಡೆ ಮಾಡಲು, ಗ್ಯಾಲಕ್ಸಿ ಅನ್‌’ಪ್ಯಾಕ್‌’ಡ್ ಈವೆಂಟ್ ಅನ್ನು ಫೆಬ್ರುವರಿ 1ರಂದು ನಡೆಸಲಿದೆ.ಹೊಸ ಸರಣಿಯಲ್ಲಿ ಎಸ್‌23, ಗ್ಯಾಲಕ್ಸಿ ಎಸ್‌23+ ಮತ್ತು ಗ್ಯಾಲಕ್ಸಿ ಎಸ್‌23 ಅಲ್ಟ್ರಾ ಮಾದರಿಯನ್ನು ಪರಿಚಯಿಸುವ ನಿರೀಕ್ಷೆಯಿದೆ.

ದಕ್ಷಿಣ ಕೊರಿಯಾದ ಬ್ರ್ಯಾಂಡ್ ಸ್ಯಾಮ್‌’ಸಂಗ್, ಪ್ರತಿ ವರ್ಷ ಎಸ್‌ ಪ್ರೀಮಿಯಂ ಸರಣಿಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, 2023ರ ಆರಂಭದಲ್ಲಿ ಎಸ್‌23 ಮಾದರಿಯನ್ನು ಬಿಡುಗಡೆ ಮಾಡಲಿದೆ.

ಆ್ಯಂಡ್ರಾಯ್ಡ್ 13 ಮೂಲಕ ನೂತನ ಮಾದರಿಗಳನ್ನು ಪರಿಚಯಿಸುವ ಜತೆಗೆ, ಸ್ಯಾಪ್‌’ಡ್ರ್ಯಾಗನ್ 8 ಜೆನ್. ಪ್ರೊಸೆಸರ್ ಹೊಂದಿರುತ್ತದೆ ಎನ್ನಲಾಗಿದೆ.