ಮನೆ ರಾಜ್ಯ ಮೈಸೂರು ಸಂಚಾರಿ ಪೊಲೀಸರಿಂದ ವಾಹನ ತಪಾಸಣೆ: ಬೈಕ್ ನಿಂದ ಬಿದ್ದು ವೃದ್ಧನಿಗೆ ಗಂಭೀರ ಗಾಯ

ಮೈಸೂರು ಸಂಚಾರಿ ಪೊಲೀಸರಿಂದ ವಾಹನ ತಪಾಸಣೆ: ಬೈಕ್ ನಿಂದ ಬಿದ್ದು ವೃದ್ಧನಿಗೆ ಗಂಭೀರ ಗಾಯ

0
ಸಾಂದರ್ಭಿಕ ಚಿತ್ರ

ಮೈಸೂರು(Mysuru): ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಬೈಕ್ ನಿಂದ ವೃದ್ಧರೋರ್ವರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಮರಾಜಪುರಂನ ನಿವಾಸಿ ಬಸವರಾಜು  ಬೈಕ್ ನಿಂದ ಬಿದ್ದು ಗಾಯಗೊಂಡ ವೃದ್ಧ.

ನಗರದ ಆರ್’ಟಿಓ ವೃತ್ತದಲ್ಲಿ ಕೆ ಆರ್ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಹೆಲ್ಮೆಟ್ ಹಾಕದ ವೃದ್ಧನಿಗೆ ಬ್ಯಾರಿಕೇಡ್ ಅಡ್ಡಗಟ್ಟಿ ನಿಲ್ಲಿಸಲು ಟ್ರಾಫಿಕ್ ಪೊಲೀಸರು ಯತ್ನಿಸಿದ್ದು, ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್ ನಿಂದ ಬಿದ್ದು ವೃದ್ಧನಿಗೆ  ಗಂಭೀರ ಗಾಯಗಳಾಗಿದೆ.

ಮರದ ಹಿಂದೆ ಅವಿತು ಹಿಡಿಯಲು ಪೊಲೀಸರು ಯತ್ನಿಸಿದ ಪರಿಣಾಮ ಈ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಸಂಚಾರಿ ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪ್ರತಿದಿನ ವಾಹನ ತಪಾಸಣೆ ಹೆಸರಿನಲ್ಲಿ ವಾಹನ ಸವಾರರಗೆ ಪೋಲಿಸರು ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲಕಾಲ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ  ಮಾತಿನ ಚಕಮಕಿ ನಡೆಯಿತು.