ಮನೆ ಮನರಂಜನೆ ಜ.6ಕ್ಕೆ ‘ಸ್ಫೂಕಿ ಕಾಲೇಜ್’ ಬಿಡುಗಡೆ

ಜ.6ಕ್ಕೆ ‘ಸ್ಫೂಕಿ ಕಾಲೇಜ್’ ಬಿಡುಗಡೆ

0

ವಿವೇಕ್‌ ಸಿಂಹ ಹಾಗೂ ಖುಷಿ ರವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಸ್ಫೂಕಿ ಕಾಲೇಜ್‌’ ಚಿತ್ರ ಜ.06ರಂದು ತೆರೆ ಕಾಣುತ್ತಿದೆ.

ಸ್ಪೂಕಿ ಕಾಲೇಜ್ ಬಹುತೇಕ ಚಿತ್ರೀಕರಣ ಧಾರವಾಡದ ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ನಡೆದಿದೆ. ಅರಣ್ಯ ಭಾಗದ ಚಿತ್ರೀಕರಣವನ್ನು ದಾಂಡೇಲಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. “ರಂಗಿತರಂಗ’, “ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ನಿರ್ಮಾಪಕ ಹೆಚ್. ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಭರತ್ ಈ ಸಿನಿಮಾದ ನಿರ್ದೇಶಕರು. 

ಇನ್ನು, ಸ್ಫೂಕಿ ಕಾಲೇಜ್ ಚಿತ್ರದ ಹಾಡೊಂದಕ್ಕೆ ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ರಾಜ್ಕುಮಾರ್ ಅಭಿನಯದ ವೀರಕೇಸರಿ ಚಿತ್ರದ “ಮೆಲ್ಲುಸಿರೆ ಸವಿಗಾನ..’ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.ಭೂಷಣ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ರೀಷ್ಮಾ ನಾಣಯ್ಯ ನೃತ್ಯ ಮಾಡಿದ್ದಾರೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.

ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ಸ್ಪೂಕಿ ಕಾಲೇಜ್ ನ ನಾಯಕ. ದಿಯಾ ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.