ಮನೆ ಸುದ್ದಿ ಜಾಲ ಪೊಲೀಸರ ಎಡವಟ್ಟು: ಹೆಲ್ಮೆಟ್ ಧರಿಸಿಲ್ಲವೆಂದು ಕಾರ್ ಚಾಲಕನಿಗೆ ನೋಟಿಸ್

ಪೊಲೀಸರ ಎಡವಟ್ಟು: ಹೆಲ್ಮೆಟ್ ಧರಿಸಿಲ್ಲವೆಂದು ಕಾರ್ ಚಾಲಕನಿಗೆ ನೋಟಿಸ್

0

ಮಂಗಳೂರು(Mangalore): ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ದಂಡ ಪಾವತಿಯ ನೋಟಿಸ್ ನೀಡುವ ಬದಲು ಕಾರು ಚಾಲಕನಿಗೆ ಮಂಗಳೂರು ಸಂಚಾರ ಪೊಲೀಸರು ನೋಟಿಸ್ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ನ. 29ರಂದು ಕಾರಿನ ಮಾಲೀಕರೊಬ್ಬರು ಸಂಚಾರದ ವೇಳೆ, ತಮ್ಮ ಸಹ ಸವಾರ ಹೆಲ್ಮೆಟ್​ ಹಾಕಿಲ್ಲ ಎಂದು ದಂಡ ಪಾವತಿಸುವಂತೆ ಸೂಚಿಸಿ ನೋಟಿಸ್​ ನೀಡಲಾಗಿದೆ. ಡಿ.22ರಂದು 500ರೂ. ದಂಡಪಾವತಿಗೆ ನೋಟಿಸ್ ಬಂದಿದ್ದು, ಇದನ್ನು ನೋಡಿದ ಕಾರಿನ ಮಾಲೀಕರು ಗಾಬರಿಯಾಗಿದ್ದಾರೆ.

ಇದನ್ನು ಪರಿಶೀಲನೆ ನಡೆಸಿದಾಗ ಅಟೋಮೇಶನ್ ಸೆಂಟರ್‌’ನಲ್ಲಿ ಎಡವಟ್ಟಾಗಿರುವುದು ಬೆಳಕಿಗೆ ಬಂದಿದೆ.