ಮನೆ ಕಾನೂನು ಲಂಚ ಕೇಳುವುದು ತಪ್ಪಲ್ಲ, ಸ್ವೀಕರಿಸುವುದು ತಪ್ಪು: ಹೈಕೋರ್ಟ್

ಲಂಚ ಕೇಳುವುದು ತಪ್ಪಲ್ಲ, ಸ್ವೀಕರಿಸುವುದು ತಪ್ಪು: ಹೈಕೋರ್ಟ್

0

ಬೆಂಗಳೂರು(Bengaluru): ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಂದ  ಹಣಕ್ಕೆ ಬೇಡಿಕೆಯಿಟ್ಟು ಅದನ್ನು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ ಅದನ್ನು ಲಂಚದ ಪ್ರಕರಣವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸ್ಥಿರಾಸ್ತಿಯೊಂದರ ಅಡಮಾನ ಕ್ರಯ ನೋಂದಣಿಗೆ ಹಣಕ್ಕೆ ಬೇಡಿಕೆ ಇಟ್ಟ ಸರ್ಕಾರಿ ನೌಕರನೊಬ್ಬ ಹಣ ಸ್ವೀಕರಿಸದೇ ಇದ್ದರೂ ಆತನ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಹಾಗೂ ಲಂಚ ಸ್ವೀಕಾರ ಆರೋಪದಡಿ ದಾಖಲಾಗಿದ್ದ ದೂರು ರದ್ದುಪಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿವರ:

2022ರ ಫೆ.24 ರಂದು ಆಸ್ತಿ ಅಡಮಾನ ಕ್ರಮ ಮಾಡಿಸಲು ಚಿತ್ರದುರ್ಗದ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದ್ದು, ಈ ಕೆಲಸಕ್ಕೆ ಸಿಬ್ಬಂದಿ 5 ಸಾವಿರ ರೂ ಲಂಚ ಕೇಳಿದರೆಂದು 7 ದಿನಗಳ ಬಳಿಕ ಎಸಿಬಿಗೆ ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡ ಎಸಿಬಿ ಲಂಚ ಕೇಳಿದ ಸಿಬ್ಬಂದಿಯನ್ನು ಬಂಧಿಸಲು ಕಾರ್ಯಚರಣೆ ನಡೆಸಿತ್ತು. ಆದರೆ ಅಂದು ಲಂಚ ಕೇಳಿದ ಸಿಬ್ಬಂದಿ ಕಚೇರಿಗೆ ಆಗಮಿಸದ ಕಾರಣ ಕಾರ್ಯಚರಣೆ ವಿಫಲವಾಗಿತ್ತು. 2 ತಿಂಗಳ ಬಳಿಕ ದೂರುದಾರ ಸಿಬ್ಬಂದಿಯ ಟೇಬಲ್ ಮೇಲೆ ಹಣ ಇಟ್ಟಿದ್ದ. ಆದರೆ ಆರೋಪಿ ಪ್ರತ್ಯಕ್ಷವಾಗಿ ಸ್ವೀಕರಿಸಿಲ್ಲ. ಆದ್ದರಿಂದ ಎಸಿಬಿ ದಾಳಿ ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿದೆ.