ಮನೆ ಸಾಹಿತ್ಯ ಕೆಎಸ್‌’ನ ಸಾಹಿತ್ಯ, ಕಾವ್ಯ ಗಾಯನ ಪ್ರಶಸ್ತಿಗೆ ನಾಲ್ವರು ಸಾಧಕರು ಆಯ್ಕೆ

ಕೆಎಸ್‌’ನ ಸಾಹಿತ್ಯ, ಕಾವ್ಯ ಗಾಯನ ಪ್ರಶಸ್ತಿಗೆ ನಾಲ್ವರು ಸಾಧಕರು ಆಯ್ಕೆ

0

ಮಂಡ್ಯ(Mandya): ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ ಕೊಡಮಾಡುವ ಕೆಎಸ್‌’ನ ಸಾಹಿತ್ಯ ಹಾಗೂ ಕಾವ್ಯ ಗಾಯನ ಪ್ರಶಸ್ತಿಗೆ ನಾಲ್ವರು ಸಾಧಕರು ಆಯ್ಕೆಯಾಗಿದ್ದಾರೆ.

2021–22ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕವಯಿತ್ರಿ ಸವಿತಾ ನಾಗಭೂಷಣ್‌, 2022–23ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕವಿ ಸರಜೂ ಕಾಟ್ಕರ್‌ ಆಯ್ಕೆಯಾಗಿದ್ದಾರೆ. 2021–22ನೇ ಸಾಲಿನ ಕಾವ್ಯಗಾಯನ ಪ್ರಶಸ್ತಿಗೆ ಗಾಯಕಿ ಎಂ.ಕೆ.ಜಯಶ್ರೀ, 2022–23ನೇ ಸಾಲಿನ ಕಾವ್ಯ ಗಾಯನ ಪ್ರಶಸ್ತಿಗೆ ಗಾಯಕ ಗರ್ತಿಕೆರೆ ರಾಘಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿವೆ.

ಜ.5ರಂದು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.