ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕಿವಿ-ಕಣ್ಣು

ನ್ಯಾಯಾಧೀಶರು: “ಇವನ ಎರಡು ಕಿವಿಗಳನ್ನು ಕತ್ತರಿಸಿ”

ಸರ್ದಾರ್: “ಬೇಡ ನಾನು, ಕುರುಡನಾಗಿ ಬಿಡ್ತೀನಿ”

ನ್ಯಾಯಾಧೀಶರು: “ಮೂರ್ಖ… ಕಿವಿ ಕತ್ತರಿಸಿದರೆ ಕುರುಡ ಹೇಗಾಗ್ತಿ?”

ಸರ್ದಾರ್: “ಕನ್ನಡಕವನ್ನು ನಿಮ್ಮಪ್ಪನ ಕಿವಿಗೆ ಹಾಕ್ಲ?”

*****

ನೆನಪಾಯ್ತು

ರೋಗಿ: “ಡಾಕ್ಟ್ರೆ ನೀವು ಆಪರೇಷನ್ ಮಾಡಿದಾಗಿನಿಂದ ನನ್ನ ಹೊಟ್ಟೆ ಒಳಗೆ ಸಂಗೀತ ಕೇಳಿ ಬರ್‍ತಾ ಇದೆ”

ಡಾಕ್ಟ್ರು: “ಅಬ್ಬಾ.. ಅಂತೂ ನನ್ನ ಮೊಬೈಲು ಎಲ್ಲಿದೆಯೆಂದು ಈಗ ಗೊತ್ತಾಯ್ತು”

*****

ಸ್ಲೋಗನ್‌’ಗಳು

೮೦ರ ದಶಕದಲ್ಲಿ “ಮನೆಗೆ ಮೂರು ಮಕ್ಕಳು ಸಾಕು”

೯೦ರ ದಶಕದಲ್ಲಿ “ಆರತಿಗೊಂದು ಕೀರ್ತಿಗೊಂದು”

೨೦೦೦ ದಲ್ಲಿ “ಮನೆಗೊಂದು ಮಗು, ಮನೆ ತುಂಬಾ ನಗು”

ಮುಂದೆ “ದಾರಿಗೊಂದು ದೀಪ.. ಬೀದಿಗೊಂದು ಪಾಪ”

*****