ಮನೆ ತಂತ್ರಜ್ಞಾನ ಹೊಸ ಮಾದರಿಯ ವಾಚ್ ಬಿಡುಗಡೆ ಮಾಡಿದ ರೆಡ್’ಮಿ

ಹೊಸ ಮಾದರಿಯ ವಾಚ್ ಬಿಡುಗಡೆ ಮಾಡಿದ ರೆಡ್’ಮಿ

0

ಜನಪ್ರಿಯ ಮೊಬೈಲ್‌ ಕಂಪನಿ ರೆಡ್‌’ಮಿ ಎರಡು ಹೊಸ ಮಾದರಿಯ ವಾಚ್‌’ಗಳನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ರೆಡ್‌’ಮಿ ವಾಚ್‌3 ಮತ್ತು ರೆಡ್‌’ಮಿ ವಾಚ್‌ 2 ಎಂದು ಅದಕ್ಕೆ ಹೆಸರನ್ನು ಕಂಪನಿ ನೀಡಿದೆ. ರೆಡ್‌’ಮಿ ವಾಚ್‌ 3, 1.75 ಇಂಚು ಅಮೋಲ್ಡ್‌ ಡಿಸ್‌’ಪ್ಲೇಯನ್ನು ಹೊಂದಿದೆ. 60 ಹರ್ಟ್ಸ್ ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ. ಅದು 121 ನ್ಪೋರ್ಟ್ಸ್ ಮೋಡ್‌ ಅನ್ನು ಹೊಂದಿವೆ. ಅದಕ್ಕೆ 7 ಸಾವಿರ ರೂ. ಬೆಲೆ ಇರುವ ಸಾಧ್ಯತೆ ಇದೆ.

ರೆಡ್‌’ಮಿ ವಾಚ್‌2, 2 ಸಾವಿರ ರೂ. ಬೆಲೆ ಹೊಂದಿರುವ ಸಾಧ್ಯತೆ ಇದೆ. ಮಿಡ್‌’ನೈಟ್‌ ಬ್ಲ್ಯಾಕ್‌, ಡ್ರೀಮ್‌ ವೈಟ್‌ ಬಣ್ಣಗಳಲ್ಲಿ ಸಿಗಲಿದೆ.