ಮನೆ ರಾಷ್ಟ್ರೀಯ ಇಂಡಿಗೋ ವಿಮಾನದಲ್ಲಿ ಮದ್ಯ ಸೇವಿಸಿ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರಿದ ಇಬ್ಬರ ಬಂಧನ

ಇಂಡಿಗೋ ವಿಮಾನದಲ್ಲಿ ಮದ್ಯ ಸೇವಿಸಿ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರಿದ ಇಬ್ಬರ ಬಂಧನ

0

ನವದೆಹಲಿ(Newdelhi):  ಮದ್ಯ ಸೇವಿಸಿ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ದೆಹಲಿ-ಪಾಟ್ನಾ ಇಂಡಿಗೋ ವಿಮಾನದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ದೆಹಲಿ-ಪಾಟ್ನಾ ಇಂಡಿಗೋ ( 6E-6383 ಫ್ಲೈಟ್‌ ನಂಬರ್)‌ ದಲ್ಲಿ ಇಬ್ಬರು ಮದ್ಯ ಕೊಂಡೊಯ್ದು ಸೇವಿಸಿದ್ದರು. ಇದನ್ನು ಪ್ರಶ್ನಿಸಿದ ಸಿಬ್ಬಂದಿಗಳ ಜೊತೆ ಪಾನಮತ್ತರಾಗಿದ್ದ ಇಬ್ಬರು ಪ್ರಯಾಣಿಕರು  ಜಗಳವಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.

ಆ ಬಳಿಕ ಕುಡಿಯುವುದನ್ನು ನಿಲ್ಲಿಸಿ ಕ್ಷಮೆ ಕೇಳಿದ್ದಾರೆ. ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಈ ವಿಷಯವನ್ನು ಭದ್ರತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಎಸ್‌ ಎಚ್‌ ಒ ರಾಬರ್ಟ್ ಪೀಟರ್ ಈ ಬಗ್ಗೆ ಮಾತಾನಾಡಿ, ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸಿದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.