ಮನೆ ರಾಷ್ಟ್ರೀಯ ವ್ಯಾನ್-ಟ್ರಕ್ ನಡುವೆ ಭೀಕರ ಅಪಘಾತ: 9 ಮಂದಿ ಸಾವು

ವ್ಯಾನ್-ಟ್ರಕ್ ನಡುವೆ ಭೀಕರ ಅಪಘಾತ: 9 ಮಂದಿ ಸಾವು

0

ಮಹಾರಾಷ್ಟ್ರ(Maharashtra):  ವ್ಯಾನ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಪುರುಷರು, ಮೂವರು ಮಹಿಳೆಯರು ಹಾಗೂ ಒಂದು ಮಗು ಸೇರಿದಂತೆ 9 ಜನರು ಸಾವನ್ನಪ್ಪಿರುವ ಘಟನೆ ಗೋವಾ- ಮುಂಬೈ ಹೆದ್ದಾರಿಯ ರಾಯಗಡ ಜಿಲ್ಲೆ ರೆಪೊಲಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಘಟನಾ ಸ್ಥಳವಾದ ರೆಪೊಲಿ ಗ್ರಾಮ ಮುಂಬೈಯಿಂದ ಸುಮಾರು 130 ಕಿಲೋ ಮೀಟರ್‌ ದೂರದಲ್ಲಿದೆ. ದುರಂತದಲ್ಲಿ ಮೃತಪಟ್ಟವರನ್ನು ರತ್ನಗಿರಿ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ. ಎಲ್ಲರೂ ಸಂಬಂಧಿಕರೆಂದು ಎಸ್ಪಿ ಸೋಮನಾಥ್ ಗರ್ಗೆ ತಿಳಿಸಿದ್ದಾರೆ,

ಘಟನೆಯಲ್ಲಿ ಗಾಯಗೊಂಡ ನಾಲ್ಕು ವರ್ಷದ ಮಗುವನ್ನು ಮಂಗಾಂವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಅಸುನೀಗಿದ ಜನರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.