ಮನೆ ಸುದ್ದಿ ಜಾಲ ಮರಕ್ಕೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮರಕ್ಕೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

0

ಚಿಕ್ಕಮಗಳೂರು: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಬಳಿ ನಡೆದಿದೆ.

ಶಿವನಿ ಮೆಸ್ಕಾಂನಲ್ಲಿ  ಕೆಲಸ ಮಾಡುತ್ತಿದ್ದ ಜೆ.ಇ.ಕಿರಣ್ (32) ನಾಗರಾಜ್ (40) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.

ಕಾರಿನಲ್ಲಿ ಹೋಗುತ್ತಿರುವ ವೇಳೆ ಏಕಾಏಕಿ ಚಾಲಕನ ನಿಯತ್ರಣ ತಪ್ಪಿ ಮಾಕನಹಳ್ಳಿ ಬಳಿ ಮರಕ್ಕೆ ಢಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಳೆದ ಕೆಲ ಸಮಯದಿಂದ ಶಿವನಿ ಮೆಸ್ಕಾಂ ನಲ್ಲಿ ಜೆಇ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲಕದ ಕಿರಣ್ ಅವರಿಗೆ ಫೆ.8 ರಂದು ಮದುವೆ ನಿಶ್ಚಯವಾಗಿತ್ತು.  ನಾಗರಾಜ್ ನಾಗರಾಜ್ ಅಜ್ಜಂಪುರ ತಾಲೂಕಿನ ಶಿವನಿ ಮೂಲದವರು.