ಮನೆ ರಾಷ್ಟ್ರೀಯ ಉತ್ತರ ಪ್ರದೇಶ: ಕಾರಿಗೆ ಟ್ರಕ್ ಡಿಕ್ಕಿ: 6 ಮಂದಿ ಸಾವು

ಉತ್ತರ ಪ್ರದೇಶ: ಕಾರಿಗೆ ಟ್ರಕ್ ಡಿಕ್ಕಿ: 6 ಮಂದಿ ಸಾವು

0

ಉತ್ತರ ಪ್ರದೇಶ(Uttar Pradesh): ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಘಟನೆ ಅಚಲ್‌ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಲಖನೌ-ಕಾನ್ಪುರ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಸ್ವಲ್ಪ ದೂರದವರೆಗೆ ಎಳೆದೊಯ್ಯಲ್ಪಟ್ಟ ಕಾರು ಮಹಿಳೆ ಮತ್ತು ಆಕೆಯ ಮಗಳಿಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಶಂಕರ್ ಮೀನಾ ತಿಳಿಸಿದ್ದಾರೆ.

ಇಬ್ಬರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಛೋಟೆಲಾಲ್ (32), ಶಿವಾಂಗ್ (30), ವಿಮಲೇಶ್ (60), ರಾಮ್‌ ಪ್ಯಾರಿ (45) ಮತ್ತು ಆಕೆಯ ಮಗಳು ಶಿವಾನಿ (13) ಎಂದು ಗುರುತಿಸಲಾಗಿದೆ.

ಇನ್ನೊಬ್ಬರ ಮೃತದೇಹದ ಗುರುತು ಇನ್ನು ಪತ್ತೆಯಾಗಿಲ್ಲ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉನ್ನಾವ್ ಅಪಘಾತಕ್ಕೆ ಸಂತಾಪ ಸೂಚಿಸಿದ್ದಾರೆ.