ಮನೆ ರಾಜ್ಯ ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು

ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು

0

ಮಂಡ್ಯ(Mandya): ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಮಂಡ್ಯ ರೈಲ್ವೆ ನಿಲ್ದಾಣದ ಬಳಿ ಇಂದು ನಡೆದಿದೆ.

ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್‌’ಪ್ರೆಸ್ ಮಂಡ್ಯ ನಿಲ್ದಾಣ ಸಮಿಪಿಸುತ್ತಿದ್ದಂತೆ ರೈಲು ಬರುತ್ತಿರುವುದನ್ನು ಗಮನಿಸದ ಇಬ್ಬರು ಮಹಿಳೆಯರು ರೈಲ್ವೆ ಹಳಿ ದಾಟುತ್ತಿದ್ದ  ವೇಳೆ ದುರಂತ ಸಂಭವಿಸಿದೆ.

ಮಂಡ್ಯ ತಾಲೂಕಿನ ಬಸರಾಳು ಸಮೀಪದ ಹುರುಳಿ ಜವರನಕೊಪ್ಪಲು ಮೂಲದ ಶಶಿ ಮೃತ ಮಹಿಳೆ. ಇನ್ನೊಬ್ಬ ಮಹಿಳೆಯ ಮುಖ, ರೈಲು ಗುದ್ದಿದ ರಭಸಕ್ಕೆ ನಜ್ಜು ಗುಜ್ಜಾಗಿದ್ದು, ಮಹಿಳೆಯ ಗುರುತು ಪತ್ತೆಗಾಗಿ ಪ್ರಯತ್ನ ಮಾಡಲಾಗುತ್ತಿದೆ.

ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.