ಮನೆ ರಾಜಕೀಯ ರಾಷ್ಟ್ರಧ್ವಜ ಹಾರಿಸಿ ಭಾರತ್ ಜೋಡೋ ಯಾತ್ರೆಗೆ ತೆರೆ ಎಳೆದ ರಾಹುಲ್ ಗಾಂಧಿ

ರಾಷ್ಟ್ರಧ್ವಜ ಹಾರಿಸಿ ಭಾರತ್ ಜೋಡೋ ಯಾತ್ರೆಗೆ ತೆರೆ ಎಳೆದ ರಾಹುಲ್ ಗಾಂಧಿ

0

ಶ್ರೀನಗರ: ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಈ ಮೂಲಕ ಭಾರತ್ ಜೋಡೋ ಯಾತ್ರೆಗೆ ಅಂತ್ಯ ಹಾಡಿದರು.

ಇದಕ್ಕೂ ಮುನ್ನ ಪಂಥಚೌಕ್‌’ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಕನ್ಯಾಕುಮಾರಿಯಿಂದ ಸೆಪ್ಟೆಂಬರ್ 7,2022ರಂದು ಆರಂಭವಾಗಿದ್ದ ಯಾತ್ರೆಯ ಉದ್ದಕ್ಕೂ 136 ದಿನಗಳ ಕಾಲ ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಧನ್ಯವಾದ ಎಂದು ಭಾರತ್ ಜೋಡೊ ಯಾತ್ರಿಗಳನ್ನು ಉದ್ದೇಶಿಸಿ ರಾಹುಲ್ ಗಾಂಧಿ ಹೇಳಿದ್ದಾರೆ.

ಬಳಿಕ, ರಾಷ್ಟ್ರಗೀತೆ ಹಾಡಲಾಯಿತು. ಸಮಾರಂಭಕ್ಕಾಗಿ ಸ್ಥಳೀಯ ಆಡಳಿತ ಬಿಗಿ ಬಂದೋಬಸ್ತ್ ಮಾಡಿದೆ.

ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಈ ಪಯಣ ಸುಮಾರು 4,080 ಕಿಲೋಮೀಟರ್ ದೂರವನ್ನು 145 ದಿನಗಳಲ್ಲಿ ಕ್ರಮಿಸಿ, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಹಾದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ತಲುಪಿದೆ.