ಮನೆ ತಂತ್ರಜ್ಞಾನ ಗೂಗಲ್ ಫೋಟೋ ಆ್ಯಪ್’ನಲ್ಲಿ ಹೊಸ ಫೀಚರ್

ಗೂಗಲ್ ಫೋಟೋ ಆ್ಯಪ್’ನಲ್ಲಿ ಹೊಸ ಫೀಚರ್

0

ಟೆಕ್ ದೈತ್ಯ ಕಂಪೆನಿಯಾಗಿರುವ ಗೂಗಲ್ ತನ್ನ ಟೆಕ್ನಾಲಜಿ ಯುಗದಲ್ಲಿ ಭಾರೀ ಮುನ್ನಡೆಯಲ್ಲಿದೆ. ಇದರ ಭಾಗವಾಗಿ ಬಂದಂತಹ ಹಲವಾರು ಅಪ್ಲಿಕೇಶನ್’ಗಳು, ಟೆಕ್ ಡಿವೈಸ್’ಗಳಿಗೆ ಸಹ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಇದರಲ್ಲಿ ಗೂಗಲ್ ಫೋಟೋ ಆ್ಯಪ್’ಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ.

ಯಾವುದೇ ಸ್ಮಾರ್ಟ್’ಫೋನ್’ಗಳಲ್ಲಿ ಸ್ಟೋರೇಜ್ ಫುಲ್ ಆದಾಗ ಈ ಅಪ್ಲಿಕೇಶನ್ ಮಾತ್ರ ತುಂಬಾನೇ ಸಹಕಾರಿಯಾಗುತ್ತದೆ. ಯಾಕೆಂದರೆ ಇಲ್ಲಿ ನಮ್ಮ ಮೊಬೈಲ್’ನಲ್ಲಿರುವಂತಹ ಯಾವುದೇ ಫೋಟೋ, ವಿಡಿಯೋವನ್ನು ಆ್ಯಡ್ ಮಾಡಬಹುದಾಗಿದೆ. ಇದರಿಂದ ಸ್ಮಾರ್ಟ್’ಫೋನ್’ನಲ್ಲಿರುವಂತಹ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸಬಹುದು. ಇದೀಗ ಹೊಸ ಫೀಚರ್ ಒಂದು ಗೂಗಲ್ ಫೋಟೋ ಆ್ಯಪ್’ನಲ್ಲಿ ಬಂದಿದ್ದು, ಇನ್ಮುಂದೆ ಈ ಅಪ್ಲಿಕೇಶನ್’ನಲ್ಲು ಆಲ್ಬಮ್ ರೀತಿಯಲ್ಲಿ ಫೋಲ್ಡರ್ ಕ್ರಿಯೇಟ್ ಮಾಡಬಹುದು.

ಗೂಗಲ್ ಫೋಟೋ ಅಪ್ಲಿಕೇಶನ್ ಅನೇಕರಿಗೆ ಸ್ಟೋರೇಜ್ ಸಮಸ್ಯೆಯಲ್ಲಿ ಸಿಲುಕಿಕೊಂಡವರಿಗೆ ಸಹಕಾರಿಯಾಗಿದೆ. ಕಾರಣವೇನೆಂದರೆ ಇಲ್ಲಿ ಯಾವುದೇ ಫೋಟೋ, ವಿಡಿಯೋವನ್ನು ಜೀಮೇಲ್ ಮೂಲಕ ಆ್ಯಡ್ ಮಾಡಿಟ್ಟುಕೊಳ್ಳಬಹುದು. ಸದ್ಯ ಇನ್ಮುಂದೆ ಈ ಆ್ಯಪ್ನಲ್ಲಿ ಆಲ್ಬಮ್ ಮೂಲಕ ಫೋಲ್ಡರ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ಫೋಟೋ ಆ್ಯಪ್’ನಲ್ಲಿ ಆಲ್ಬಮ್ ಕ್ರಿಯೇಟ್ ಮಾಡುವುದು ಹೇಗೆ?

ಮೊದಲು ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್’ನಲ್ಲಿ ಗೂಗಲ್ ಫೋಟೋ ಆ್ಯಪ್ ಅನ್ನು ಓಪನ್ ಮಾಡಿ. ಇದಾದ ಬಳಿಕ ನಿಮ್ಮ ಜೀಮೇಲ್ ಮೂಲಕ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ.

ಸೈನ್ ಇನ್ ಮಾಡಿದ ನಂತರ ನಿಮಗೆ ನಿಮ್ಮ ಹಲವಾರು ಫೋಟೋಗಳು ಕಾಣಿಸಿಕೊಳ್ಳುತ್ತವೆ. ಈ ಆಯ್ಕೆಯಲ್ಲಿ ನಿಮಗೆ ಬೇಕಾದ ಫೋಟೋಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಫೋಟೋಗಳನ್ನು ಸೆಲೆಕ್ಟ್ ಮಾಡಿದ ನಂತರ ಡಿಸ್ಪ್ಲೇನ ಮೇಲ್ಭಾಗದಲ್ಲಿ + (ಪ್ಲಸ್) ಐಕಾನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದರಲ್ಲಿ ಹಲವು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಈ ಮೂಲಕ ಹೊಸ ಆಲ್ಬಮ್ ರಚಿಸಬಹುದು.

ನಂತರದಲ್ಲಿ ನೀವು ಹೊಸದಾಗಿ ರಚಿಸಿದ ಆಲ್ಬಮ್’ಗೆ ಒಂದು ಟೈಟಲ್ ಅನ್ನು ನೀಡಬೇಕು.

ಟೈಟಲ್ ಕೊಟ್ಟ ನಂತರ ನಿಮ್ಮ ಆಲ್ಬಮ್ ಕ್ರಿಯೇಟ್ ಆಗುತ್ತದೆ. ಈ ಮೂಲಕ ನಿಮಗೆ ಯಾವಾಗ ಬೇಕಾದರೂ ಈ ಆಲ್ಬಮ್ ಅನ್ನು ಓಪನ್ ಮಾಡಿ ನಿಮಗೆ ಬೇಕಾದ ಫೋಟೋವನ್ನು ನೋಡಬಹುದಾಗಿದೆ.

ಗೂಗಲ್ ಫೋಟೋ ಆ್ಯಪ್ ಸ್ಮಾರ್ಟ್ಫೋನ್ ಬಳಕೆದಾರರ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸಲಿರುವಂತಹ ಒಂದು ದೊಡ್ಡ ವೇದಿಕೆ ಎಂದು ಹೇಳ್ಬಹುದು. ಇನ್ನು ಈ ಆ್ಯಪ್ ಮೂಲಕ ಫೋಟೋ ಅಥವಾ ವಿಡಿಯೋವನ್ನು ಆ್ಯಡ್ ಮಾಡಿದ್ರೆ ಬೇರೆ ಯಾವುದೇ ಡಿವೈಸ್ನಲ್ಲೂ ನೋಡಬಹುದಾಗಿದೆ. ಆದರೆ ನಿಮ್ಮ ಗೂಗಲ್ ಅಕೌಂಟ್ಗೆ ಸೈಟ್ ಇನ್ ಆಗಬೇಕು ಅನ್ನೋದನ್ನು ಗಮನದಲ್ಲಿಡಿ. ಇನ್ನು ಈ ಗೂಗಲ್ ಆ್ಯಪ್ನಲ್ಲಿ ಬಳಕೆದಾರರು ಒಟ್ಟು 20 ಸಾವಿರ ಫೋಟೋ ಮತ್ತು ವಿಡಿಯೋಗಳನ್ನು ಆ್ಯಡ್ ಮಾಡಬಹುದಾಗಿದೆ.

ಗೂಗಲ್’ನಿಂದ ಕ್ವಿಕ್ ಡಿಲೀಟ್ ಫೀಚರ್ ಬಿಡುಗಡೆ

ಗೂಗಲ್ ಕ್ರೋಮ್ ಪರಿಚಯಿಸಿರುವ ಕ್ವಿಕ್ ಡಿಲೀಟ್ ಫೀಚರ್’ನ ಆ್ಯಕ್ಟಿವೇಶನ್ ಫೀಚರ್ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಕಂಪೆನಿ ಬಿಡುಗಡೆ ಮಾಡಿಲ್ಲ. ಇದರ ಬಳಕೆ ಸಹ ಹೇಗೆ ಮಾಡುವುದು ಎನ್ನುದರ ಬಗ್ಗೆಯೂ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಆಯ್ಕೆಯು ಬಳಕೆದಾರು ಗೂಗಲ್ ಕ್ರೋಮ್ನಲ್ಲಿ ಮಾಡಿದಂತಹ ಸರ್ಚ್ ಹಿಸ್ಟರಿಯನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಬಹುದಾಗಿದೆ. ಇದರಿಂದ ಇನ್ಮುಂದೆ ನಿಮ್ಮ ಗೌಪ್ಯತೆಯನ್ನುಕಾಪಾಡಲು ಸುಲಭವಾಗಲಿದೆ.